ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ದೂರು ದಾಖಲು

7
’ನಾನು ಕೂಡ ನಗರ’ ನಕ್ಸಲ ಎಂದು ಹೇಳಿಕೊಂಡಿದ್ದ ಕಾರಣ

ಸಾಹಿತಿ ಗಿರೀಶ್ ಕಾರ್ನಾಡ್ ವಿರುದ್ಧ ದೂರು ದಾಖಲು

Published:
Updated:

ಬೆಂಗಳೂರು: ‘ನಾನು ಕೂಡ ನಗರ ನಕ್ಸಲ್’ ಎಂದು ಹೇಳಿಕೊಂಡಿರುವ ಸಾಹಿತಿ ಗಿರೀಶ ಕಾರ್ನಡ ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸುವಂತೆ ಆಗ್ರಹಿಸಿ ಹೈಕೋರ್ಟ್ ವಕೀಲ ಎನ್‌.ಪಿ.ಅಮೃತೇಶ್ ವಿಧಾನಸೌಧ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸೆ.5ರಂದು ನಡೆದ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಸಮಾವೇಶದಲ್ಲಿ ಗಿರೀಶ ಕಾರ್ನಾಡ ‘ನಾನು ಕೂಡ ನಗರ ನಕ್ಸಲ್’ ಎಂಬ ಫಲಕವನ್ನು ಕೊರಳಿಗೆ ಹಾಕಿಕೊಂಡಿದ್ದರು.

‘ನಕ್ಸಲ್ ಸಂಘಟನೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಿಷೇಧ ಮಾಡಲಾಗಿದೆ. ಹೀಗಿರುವಾಗ, ನಾನೂ ಒಬ್ಬ ನಕ್ಸಲ್ ಎಂದು ಹೇಳಿಕೊಂಡು ಓಡಾಡುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ. ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಅಮೃತೇಶ್ ಒತ್ತಾಯಿಸಿದ್ದಾರೆ.

‘ಸಿಪಿಐನ (ಮಾವೋವಾದಿ) ಸಹ ಸಂಘಟನೆಯಾದ ಮಹಾರಾಷ್ಟ್ರದ ‘ಕಬೀರ್ ಕಾಲಾ ಮಂಚ್’ ಆಯೋಜಿಸಿದ್ದ ಸಮಾವೇಶದಲ್ಲೂ ಕಾರ್ನಾಡ ಪಾಲ್ಗೊಂಡಿದ್ದರು. ನಿಷೇಧಿತ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಗತ್ಯವೇನಿತ್ತು. ಈ ಸಂಬಂಧವೂ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 13

    Happy
  • 3

    Amused
  • 1

    Sad
  • 0

    Frustrated
  • 11

    Angry

Comments:

0 comments

Write the first review for this !