ಬೆಂಗಳೂರು ಈಗ ಕೂಲ್ ಕೂಲ್

ಭಾನುವಾರ, ಜೂಲೈ 21, 2019
28 °C

ಬೆಂಗಳೂರು ಈಗ ಕೂಲ್ ಕೂಲ್

Published:
Updated:
Prajavani

ಬೆಂಗಳೂರು: ರಾಜ್ಯಕ್ಕೆ ತಡವಾಗಿ ಕಾಲಿಟ್ಟ ಮುಂಗಾರು ಮಳೆ ನಗರದಲ್ಲಿ ಭಾನುವಾರ ತಂಪೆರೆಯಿತು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಐದು ದಿನ ಸತತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಎರಡು ದಿನ ಮೋಡ ಕವಿದ ವಾತಾವರಣದ ನಡುವೆ ‌ಆಗಾಗ ಸೂರ್ಯನ ದರ್ಶನವಾಗುತ್ತಿತ್ತು.

ಭಾನುವಾರ ಮಳೆಯ ಸಿಂಚನವಾಗಿದ್ದು, ವಾತಾವರಣವನ್ನು ಮತ್ತಷ್ಟು ತಂಪಾಗಿಸಿದೆ. ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ ಇತ್ತು. ಇನ್ನೂ ಎರಡು ದಿನ ಇದೇ ರೀತಿಯ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಎರಡು ದಿನಗಳ ಹಿಂದಿನ ಮುನ್ಸೂಚನೆ ಗಮನಿಸಿದಾಗ ಉತ್ತಮವಾಗಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ, ಅಂದುಕೊಂಡಷ್ಟು ಮಳೆಯಾಗಿಲ್ಲ. ಸೋಮವಾರದ ಮುನ್ಸೂಚನೆ ಗಮನಿಸಿ ಮುಂದೆ ಮಳೆಯಾಗುವುದೋ, ಇಲ್ಲವೋ ಎಂಬುದನ್ನು ಹೇಳಬಹುದು’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !