ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದಲ್ಲೂ ಬ್ಯಾನ್ ಆಗುತ್ತಾ ಬಾಂಬೆ ಮಿಠಾಯಿ?

ಪುದುಚೇರಿ ಮತ್ತು ತಮಿಳುನಾಡು ಸರ್ಕಾರ ಬಾಂಬೆ ಮಿಠಾಯಿ (ಕಾಟನ್‌ ಕ್ಯಾಂಡಿ) ಉತ್ಪಾದನೆ ಮತ್ತು ಮಾರಾಟ ನಿಷೇಧ
Published 22 ಫೆಬ್ರುವರಿ 2024, 20:30 IST
Last Updated 22 ಫೆಬ್ರುವರಿ 2024, 20:30 IST
ಅಕ್ಷರ ಗಾತ್ರ

ಬೆಂಗಳೂರು: ಪುದುಚೇರಿ ಮತ್ತು ತಮಿಳುನಾಡು ಸರ್ಕಾರ ಬಾಂಬೆ ಮಿಠಾಯಿ (ಕಾಟನ್‌ ಕ್ಯಾಂಡಿ) ಉತ್ಪಾದನೆ ಮತ್ತು ಮಾರಾಟ ನಿಷೇಧಿಸಿದ ಬೆನ್ನಲ್ಲೇ ಆಹಾರ ಸುರಕ್ಷತೆ ಆಯುಕ್ತರ ಕಾರ್ಯಾಲಯ ಕೂಡ ಮಾದರಿಗಳನ್ನು ಸಂಗ್ರಹಿಸಲು ಸೂಚಿಸಿದೆ.

‘ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿಯಲ್ಲಿ ರೊಡಮೈನ್‌-ಬಿ ಅಂಶ ಇರುವುದು ದೃಢಪಟ್ಟಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್‌ ರೋಗ ಬರುವ ಸಾಧ್ಯತೆ ಇದೆ ಎಂಬ ಅಂಶ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ, ರಾಜ್ಯದಲ್ಲೂ ಬಾಂಬೆ ಮಿಠಾಯಿಯ ಮಾದರಿಗಳನ್ನು ಸಂಗ್ರಹಿಸಲು ಸೂಚನೆ ನೀಡಲಾಗಿದೆ’ ಎಂದು ಆಹಾರ ಸುರಕ್ಷತೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದರು.

‘ಬಾಂಬೆ ಮಿಠಾಯಿಗೆ ಸಕ್ಕರೆ, ಬಣ್ಣಗಳನ್ನು ಹಾಕುವುದು ಅಪಾಯಕಾರಿ’ ಎಂದು ತಮಿಳುನಾಡು ಆಹಾರ ತಜ್ಞರು ಎಚ್ಚರಿಕೆ ನೀಡಿದ್ದರು. ಇದರಲ್ಲಿ ರಾಸಾಯನಿಕ ವಸ್ತುಗಳು ಪತ್ತೆಯಾಗಿತ್ತು. ನಿರಂತರ ಪರೀಕ್ಷೆ ಬಳಿಕ ಇದರಲ್ಲಿ ರೊಡಮೈನ್‌–ಬಿ ಅಂಶ ಹೆಚ್ಚು ಇರುವುದು ಕಂಡು ಬಂದಿತ್ತು. ಇದನ್ನು ಸೇವನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

‘ರೊಡಮೈನ್‌–ಬಿ ಎಂಬ ರಾಸಾಯನಿಕವನ್ನು ಕಾಗದ, ಚರ್ಮ, ಜವಳಿ ಮತ್ತು ಬಣ್ಣಗಳ ಉದ್ಯಮದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣ ಪಡೆಯಲು ಬಳಕೆ ಮಾಡಲಾಗುತ್ತದೆ. ಪುಡಿ ರೂಪದಲ್ಲಿರುವ ಹಸಿರು ಬಣ್ಣದ ಈ ರಾಸಾಯನಿಕ ನೀರಿಗೆ ಸೇರಿಸಿದರೆ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದು ನೇರವಾಗಿ ದೇಹದೊಳಕ್ಕೆ ಪ್ರವೇಶಿಸಿದರೆ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ’ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT