ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಮನೆ ಆರೈಕೆಯಲ್ಲಿ ಶೇ 99ರಷ್ಟು ಸೋಂಕಿತರು

ಪ್ರಕರಣ ಹೆಚ್ಚಳವಾದರೂ ವ್ಯತ್ಯಾಸವಾಗದ ಆಸ್ಪತ್ರೆ ದಾಖಲಾತಿ
Last Updated 15 ಜೂನ್ 2022, 15:39 IST
ಅಕ್ಷರ ಗಾತ್ರ

ಬೆಂಗಳೂರು:ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಕಂಡರೂ ಆಸ್ಪತ್ರೆ ದಾಖಲಾತಿಯಲ್ಲಿ ವ್ಯತ್ಯಾಸವಾಗಿಲ್ಲ. ಕೊರೊನಾ ಸೋಂಕಿತರಲ್ಲಿ ಶೇ 99.26ರಷ್ಟುಮಂದಿ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ.

ನಗರದಲ್ಲಿ ಸದ್ಯ 3,700ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.ಸೋಂಕಿತರಲ್ಲಿ 28 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. 25 ಮಂದಿ ಸಾಮಾನ್ಯ ಹಾಸಿಗೆ, ಇಬ್ಬರು ಎಚ್‌ಡಿಯು ಹಾಸಿಗೆ ಹಾಗೂ ಒಬ್ಬರು ಐಸಿಯು ಹಾಸಿಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಹೊಸ ಪ್ರಕರಣಗಳ ಸಂಖ್ಯೆ 500ರ ಗಡಿಯ ಆಸುಪಾಸಿಗೆ ಏರಿಕೆಯಾಗಿದ್ದರೂ ಸೋಂಕಿತರಲ್ಲಿ ಪ್ರತಿನಿತ್ಯ ನಾಲ್ಕರಿಂದ ಐದು ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ದಾಖಲಾಗುತ್ತಿರುವ ಹೆಚ್ಚಿನವರಿಗೆ ಸಾಮಾನ್ಯ ಹಾಸಿಗೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟಿರುವ 2,395 ಹಾಸಿಗೆಗಳಲ್ಲಿ 2,367 ಹಾಸಿಗೆಗಳು ಖಾಲಿ ಉಳಿದಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ (ಟ್ರಯಾಜ್ ಸೆಂಟರ್) ಸೋಂಕಿತರನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ನಗರದಲ್ಲಿ 48 ಟ್ರಯಾಜ್ ಸೆಂಟರ್‌ಗಳಿವೆ.

ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಕೊರೊನಾ ವೈರಾಣುವಿನ ಆಲ್ಫಾ,ಬೀಟಾ, ಡೆಲ್ಟಾ ಮತ್ತು ಉಪತಳಿಗಳು, ಇಟಾ, ಕಪ್ಪಾ, ಪಾಂಗೊ ಹಾಗೂ ಓಮೈಕ್ರಾನ್ರೂಪಾಂತರಿ ಈವರೆಗೆ ಪತ್ತೆಯಾಗಿವೆ.ಕೋವಿಡ್ ಪೀಡಿತರಾದವರಲ್ಲಿ ಕೆಲವರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ (ಜಿನೋಮಿಕ್ ಸಿಕ್ವೆನ್ಸೀಸ್‌) ಪರೀಕ್ಷೆಗೆ ಪ್ರಯೋಗಾಯಲಕ್ಕೆ ಕಳುಹಿಸಲಾಗುತ್ತಿದ್ದು, ಸದ್ಯ ಹೊಸ ತಳಿ ಪತ್ತೆಯಾಗಿಲ್ಲ.

‘ಸದ್ಯ ಕೋವಿಡ್ ತೀವ್ರತೆ ಕಡಿಮೆಯಿದೆ.ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಯಲ್ಲಿ ಹೊಸ ರೂಪಾಂತರಿ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಕಡೆ ನಿಗಾ ಇಡಲಾಗಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT