ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌: ಸಿಸಿಬಿ ಎದುರು ಹಾಜರಾದ ಚಿಪ್ಪಿ

Last Updated 7 ಜನವರಿ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್‌ ಜಾಲ ಪ್ರಕರಣದ ಪ್ರಮುಖ ಆರೋಪಿ ಶಿವಪ್ರಕಾಶ್ ಅಲಿಯಾಸ್‌ ಚಿಪ್ಪಿ ಸಿಸಿಬಿ ಅಧಿಕಾರಿಗಳ ಎದುರು ಗುರುವಾರ ಹಾಜರಾಗಿದ್ದಾನೆ.

ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿಯೂ ಆಗಿರುವ ಶಿವಪ್ರಕಾಶ್‌, ಡ್ರಗ್ಸ್ ಪ್ರಕರಣದಲ್ಲಿ ಎ1 ಆರೋಪಿ.ಪ್ರಕರಣದಲ್ಲಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿಗೆ ಆಪ್ತನೂ ಆಗಿದ್ದ.

ಕಾಟನ್‌ಪೇಟೆ ಠಾಣೆಯಲ್ಲಿ ಈತನ ವಿರುದ್ಧ ಎಫ್‌ಐಆರ್‌ ದಾಖಲಾದ ಬಳಿಕ ನಾಪತ್ತೆಯಾಗಿದ್ದ. ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ, ಇತ್ತೀಚೆಗಷ್ಟೇ ಕೋರ್ಟ್‌ನಿಂದ ಪೊಲೀಸರು ಬಂಧಿಸದಂತೆ ಆದೇಶ ಪಡೆದುಕೊಂಡಿದ್ದ.

ಕಳೆದ ಮಂಗಳವಾರವೇ ಶಿವಪ್ರಕಾಶ್‌ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಸಿಸಿಬಿ ಕಚೇರಿಗೆ ಬಂದಿದ್ದ. ಅಧಿಕಾರಿಗಳು ಲಭ್ಯವಿಲ್ಲದಿದ್ದರಿಂದ ವಾಪಸ್‌ ಆಗಿದ್ದ. ಬಳಿಕ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ಕುಮಾರ್‌ ಶಿವಪ್ರಕಾಶ್‌ಗೆ ನೋಟಿಸ್ ನೀಡಿದ್ದರು.ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದಿದ್ದಶಿವಪ್ರಕಾಶ್‌ನನ್ನು ಪುನೀತ್ ವಿಚಾರಣೆ ನಡೆಸಿದರು.

‘ಶಿವಪ್ರಕಾಶ್‌ ತನ್ನ ವಕೀಲರೊಬ್ಬರ ಜೊತೆಯಲ್ಲಿ ಸಿಸಿಬಿಗೆ ಕಚೇರಿಗೆ ಬಂದಿದ್ದ. ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿರುವವರ ಜೊತೆಗೆ ತನ್ನ ಒಡನಾಟ ಹಾಗೂ ಡ್ರಗ್ಸ್‌ ಮೂಲಗಳ ಕುರಿತು ಪ್ರಶ್ನೆ ಕೇಳಲಾಯಿತು. ವಿಚಾರಣೆ ವೇಳೆ ಶಿವಪ್ರಕಾಶ್ ಸರಿಯಾಗಿ ಉತ್ತರಿಸಲಿಲ್ಲ. ಇನ್ನೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT