ಪಾರ್ಟಿಗೆ ಬಂದಿದ್ದ ಯುವಕನ ಕೊಲೆ

7

ಪಾರ್ಟಿಗೆ ಬಂದಿದ್ದ ಯುವಕನ ಕೊಲೆ

Published:
Updated:

ಬೆಂಗಳೂರು: ಸ್ನೇಹಿತನ ಮಗನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ರಾಜೇಶ್ ಪ್ರತಾಪ್ (28) ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ಮರಿಯಪ್ಪನಪಾಳ್ಯದ 3ನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪುಟ್ಟೇನಹಳ್ಳಿ ನಿವಾಸಿಯಾದ ರಾಜೇಶ್, ಸ್ನೇಹಿತ ಅರುಣ್ ಎಂಬುವರ ಮಗನ ಹುಟ್ಟುಹಬ್ಬದ ಪಾರ್ಟಿಗೆ ಭಾನುವಾರ ಮಧ್ಯಾಹ್ನ ಹೋಗಿದ್ದರು. ಅಲ್ಲಿಯೇ ಹಣಕಾಸು ವಿಚಾರವಾಗಿ ಮತ್ತೊಬ್ಬ ಸ್ನೇಹಿತ, ರಾಜೇಶ್ ಜತೆ ಜಗಳ ತೆಗೆದಿದ್ದ. ತನ್ನ ಸಹಚರರ ಜೊತೆ ಸೇರಿ ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದಾಗಿ ರಾಜೇಶ್, ಸ್ಥಳದಲ್ಲೇ ಅಸುನೀಗಿದರು’ ಎಂದು ಪೊಲೀಸರು ಹೇಳಿದರು. 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !