‘ಮಕ್ಕಳಲ್ಲಿ ಭೇದಭಾವ ಎಣಿಸದಿರಿ’

7

‘ಮಕ್ಕಳಲ್ಲಿ ಭೇದಭಾವ ಎಣಿಸದಿರಿ’

Published:
Updated:

ಬೆಂಗಳೂರು:‘ಪೋಷಕರು ಮಕ್ಕಳಲ್ಲಿ ಗಂಡು–ಹೆಣ್ಣು ಎಂಬ ಭೇದ ಎಣಿಸದೆ ಸಮಾನತೆಯಿಂದ ಕಾಣಬೇಕು’ ಎಂದು ಕವಿ ದೊಡ್ಡ ರಂಗೇಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ಕಲ್ಪನಾ ಚಾವ್ಲಾ ಸ್ಮರಣಾರ್ಥ ಮಗಳ ದಿನಾಚರಣೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ‘ಶಕ್ತಿ 4 ಬೇಟಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಗಂಡು ಮತ್ತು ಹೆಣ್ಣಿಗೆ ಸಮಾನ ಶಿಕ್ಷಣ, ಸ್ವಾತಂತ್ರ್ಯ ನೀಡಿದಾಗ ಮಾತ್ರ ಇಬ್ಬರಲ್ಲೂ ಸಾಮರಸ್ಯ ಮೂಡಿಸಲು ಸಾಧ್ಯ. ಹೆಣ್ಣಿನ ಮೇಲಿನ ಅತ್ಯಾಚಾರ ಗಂಡಿನ ಕ್ರೌರ್ಯವನ್ನು ಬಿಂಬಿಸುತ್ತದೆ. ಅವಳನ್ನು ಅಬಲೆಯಂತೆ ನಡೆಸಿಕೊಳ್ಳುತ್ತಿರುವ ಗಂಡಸರನ್ನು ನಾನು ಸಹಿಸುವುದಿಲ್ಲ, ಇದು ಖಂಡನೀಯ’ ಎಂದು ಹೇಳಿದರು. 

‘ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದ ಸಮಾನ ಅವಕಾಶಗಳು ಸಿಗಬೇಕು. ಅವಳ ಬುದ್ಧಿಮತ್ತೆ, ಔದಾರ್ಯ, ಕ್ಷಮಾಗುಣ ಹೊಗಳಲು ಅಸಾಧ್ಯ. ಈ ನಿಟ್ಟಿನಲ್ಲಿ ಕಲ್ಪ‌ನಾ ಚಾವ್ಲಾ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದವರೆಲ್ಲ ನಮಗೆ ಮಾದರಿ’ ಎಂದು ಅವರು ತಿಳಿಸಿದರು. ‌

‘ಗಂಡು ಹೆಣ್ಣು ಪರಸ್ಪರ ಅವಲಂಬಿತರು. ಇರ್ವರಲ್ಲಿ ಒಬ್ಬರು ಇಲ್ಲದ್ದಿದ್ದರೆ ಬದುಕೇ ಅಸಾಧ್ಯ. ಪ್ರಕೃತಿಯಲ್ಲಿ  ಸಮಾನತೆ ಕಾಣುವ ನಾವು ನಮ್ಮಲ್ಲೇ ತಾರತಮ್ಯ ಎಣಿಸುವುದು ಸಲ್ಲ. ಲಿಂಗಭೇದವಿಲ್ಲದ ಸಮಾಜ ನಿರ್ಮಾಣವಾದಾಗ ಮಾತ್ರ ಎಲ್ಲರ ಅಭ್ಯುದಯ ಸಾಧ್ಯ’ ಎಂದು ಎಮ್‌.ಇ.ಎಸ್‌ ಕಾಲೇಜಿನ ಪ್ರಾಧ್ಯಾಪಕಿ ಡಾ.ಎನ್‌.ಎಸ್‌.ಲೀಲಾ ಅಭಿಪ್ರಾಯಪಟ್ಟರು.

ಪಿಆರ್‌ಸಿಐನ ‘ವಾಗ್ಮಿ’ ನಿಯತಕಾಲಿಕೆಯನ್ನು ಬಿಡುಗಡೆ ಮಾಡಲಾಯಿತು. ಆರು ಜನ ಮಹಿಳಾ ಸಾಧಕಿಯರಿಗೆ ಸನ್ಮಾನ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !