ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ಸಾವಿರ ಪೆಟ್ಟಿಗೆ ಕಿಂಗ್‌ಫಿಷರ್‌ ಬಿಯರ್‌ ಮಾರಾಟಕ್ಕೆ ತಡೆ

Published 8 ಆಗಸ್ಟ್ 2023, 17:34 IST
Last Updated 8 ಆಗಸ್ಟ್ 2023, 17:34 IST
ಅಕ್ಷರ ಗಾತ್ರ

ಬೆಂಗಳೂರು: ಯುನೈಟೆಡ್‌ ಬ್ರೀವರೀಸ್‌ನ (ಯು.ಬಿ) ನಂಜನಗೂಡು ಘಟಕದಲ್ಲಿ ಜುಲೈ 15ರಂದು ಬಾಟ್ಲಿಂಗ್‌ ಮಾಡಲಾದ 35,000 ಪೆಟ್ಟಿಗೆ ಕಿಂಗ್‌ಫಿಶರ್‌ ಬ್ರ್ಯಾಂಡ್‌ನ ಬಿಯರ್‌ ಬಾಟಲಿಯ ತಳದಲ್ಲಿ ಬಗ್ಗಡ ಪತ್ತೆಯಾಗಿದ್ದು, ಮಾರಾಟ ನಿರ್ಬಂಧಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.

ಜುಲೈ 15ರಂದು ಬಾಟ್ಲಿಂಗ್‌ ಮಾಡಲಾದ ಬಿಯರ್‌ ಬಾಟಲಿಗಳನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮದ ಮೂಲಕ ಸರಬರಾಜು ಮಾಡಲಾಗಿದೆ. ನಿಗಮದ ಗೋದಾಮುಗಳಲ್ಲಿ ಈ ಬಾಟಲಿಗಳ ಸಂಗ್ರಹವಿದೆ. ಮದ್ಯಪಾನಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಬಿಯರ್‌ ಬಾಟಲಿಗಳ ಮಾರಾಟವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ವಿವಿಧ ಜಿಲ್ಲೆಗಳಲ್ಲಿ ಅಬಕಾರಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

‘ರಾಜ್ಯದಲ್ಲಿ ಉತ್ಪಾದನೆಯಾಗುವ ವಿವಿಧ ಬ್ರ್ಯಾಂಡ್‌ನ ಮದ್ಯದ ಪ್ರತಿ ಬ್ಯಾಚ್‌ನ ಎರಡು ಬಾಟಲಿಗಳನ್ನು ಉತ್ಪಾದಕರು ಅಬಕಾರಿ ಆಯುಕ್ತರ ಕಚೇರಿಗೆ ಪರೀಕ್ಷೆಗಾಗಿ ಸಲ್ಲಿಸಬೇಕು. ಕಿಂಗ್‌ಫಿಶರ್‌ ಬಿಯರ್‌ ಬಾಟಲಿಗಳನ್ನೂ ಪರೀಕ್ಷೆಗಾಗಿ ಒದಗಿಸಲಾಗಿತ್ತು. ಅದನ್ನು ಪರೀಕ್ಷಿಸಿದಾಗ ಬಗ್ಗಡ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ’ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ಪನ್ನದಲ್ಲಿ ದೋಷವಿಲ್ಲ ಎಂದು ಯು.ಬಿ ಬ್ರೀವರೀಸ್ ಪ್ರತಿನಿಧಿಗಳು ಸಮಜಾಯಿಷಿ ನೀಡಿದ್ದಾರೆ. ಮಾದರಿಗಳನ್ನು ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ವರದಿ ಬರುವವರೆಗೂ ಮಾರಾಟಕ್ಕೆ ನಿರ್ಬಂಧ ಮುಂದುವರಿಯಲಿದೆ’ ಎಂದು ಅವರು ಹೇಳಿದರು.

ಸದ್ಯದ ದರದಲ್ಲಿ ಮಾರಾಟ ನಿರ್ಬಂಧಿಸಿರುವ 35,000 ಪೆಟ್ಟಿಗೆಗಳಷ್ಟು ಕಿಂಗ್‌ಫಿಶರ್‌ ಬಿಯರ್‌ನ ಒಟ್ಟು ಮೌಲ್ಯ ₹ 19 ಕೋಟಿಗಳಷ್ಟಾಗಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT