ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗು ಮೂಡಿಸಿದ ಡ್ರೋನ್‌ ರೇಸ್‌

Last Updated 30 ನವೆಂಬರ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ಶುಕ್ರವಾರ ರಾತ್ರಿ ಬಣ್ಣ– ಬಣ್ಣದ ಬೆಳಕನ್ನು ಹೊರ ಸೂಸುತ್ತಾ ವೇಗವಾಗಿ ಹಾರಾಟ ನಡೆಸುತ್ತಿದ್ದ ಪುಟ್ಟ– ಪುಟ್ಟ ಡ್ರೋನ್‌ಗಳು ವೀಕ್ಷಕರಿಗೆ ರೋಮಾಂಚನ ಉಂಟು ಮಾಡಿದ್ದವು.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ ಡ್ರೋನ್‌ ರೇಸ್‌ ಯುವ ಜನರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ‘ಬೆಂಗಳೂರು ಟೆಕ್‌ ಸಮಿಟ್‌’ ಅಂಗವಾಗಿ ಏರ್ಪಡಿಸಲಾಗಿತ್ತು.

ಡ್ರೋನ್ ರೇಸ್‌ನಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ 30 ಡ್ರೋನ್‌ ಪೈಲಟ್‌ಗಳ ತಂಡಗಳು ಬಂದಿದ್ದವು. ಇವುಗಳ ರೇಸ್‌ಗಾಗಿಯೇ ಅರಮನೆ ಮೈದಾನದಲ್ಲಿ ಪ್ರತ್ಯೇಕ ಪ್ರದೇಶವನ್ನು ನಿರ್ಮಾಣ ಮಾಡಲಾಗಿತ್ತು. ಇಂಡಿಯನ್‌ ಡ್ರೋನ್‌ ಲೀಗ್ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಪ್ರತಿಯೊಂದು ಡ್ರೋನ್‌ ತೂಕ 300 ಗ್ರಾಂಗಳಷ್ಟಿತ್ತು. ಹಾರಾಟಕ್ಕೆ ನಾಗರಿಕ ವಿಮಾನ ಯಾನ ಮಹಾ ನಿರ್ದೇಶಕರ ಕಚೇರಿಯಿಂದ ಅನುಮತಿ ಪಡೆಯಲಾಗಿತ್ತು. ಪ್ರತಿಯೊಂದು ಡ್ರೋನ್‌ಗೂ ವಿಶೇಷ ಗುರುತಿನ ಸಂಖ್ಯೆಗಳನ್ನು ನೀಡಲಾಗಿತ್ತು.

ಈ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ₹ 1ಲಕ್ಷ ಬಹುಮಾನ, ದ್ವಿತೀಯ ಬಹುಮಾನ ₹50 ಸಾವಿರ ನೀಡಲಾಗುವುದು. ಬಹು ಬಳಕೆಯ ಸಾಧ್ಯತೆವುಳ್ಳ ಡ್ರೋನ್ ಕ್ರೀಡೆಯಾಗಿ ಬಳಕೆಯಾಗುತ್ತಿರುವುದು ಹೊಸ ವಿದ್ಯಮಾನ. ಖಾಸಗಿಯಾಗಿ ಹಾಲ್‌ಗಳಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆ ಈಗ ತೆರೆದ ಪ್ರದೇಶದಲ್ಲಿ ನಡೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT