ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಬಸ್‌ ಪಾಸ್‌: ಪ್ರಕರಣ ದಾಖಲು

Last Updated 6 ಅಕ್ಟೋಬರ್ 2019, 19:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ನಕಲಿ ಬಸ್ ಪಾಸ್ ಹೊಂದಿದ್ದ ವಿದ್ಯಾರ್ಥಿ ಮತ್ತು ನಕಲಿ ಪಾಸ್ ಮುದ್ರಿಸಿಕೊಟ್ಟ ಪ್ರಿಂಟಿಂಗ್ ಪ್ರೆಸ್ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಸಹಾಯಕ ಸಂಚಾರ ನಿರೀಕ್ಷಕಿ ವಿ. ಗುಣಶೀಲಾ ಮತ್ತು ಸಂಚಾರ ನಿಯಂತ್ರಕ ಗಿರಿಧರ್ ಅವರು ಯಶವಂತಪುರ ಸಂಚಾರ ನಿರ್ವಹಣೆ ಕೇಂದ್ರದಲ್ಲಿ (ಟಿಟಿಎಂಸಿ) ತಪಾಸಣೆ ನಡೆಸಿ ದಾಗ ಹೇಮಂತಕುಮಾರ್ ಎಂಬ ವಿದ್ಯಾರ್ಥಿ ಬಳಸುತ್ತಿದ್ದ ನಕಲಿ ಬಸ್‌ ಪಾಸ್ ಸಿಕ್ಕಿದೆ.

ಚಿಕ್ಕಮಗಳೂರು ಜಿಲ್ಲೆ ಬೀರೂರಿನ ಹೇಮಂತ ಕುಮಾರ್, 2018–19ರ ಬಸ್‌ ಪಾಸ್‌ ಅನ್ನು ನವೀಕರಿಸಿ ಕೊಳ್ಳದೆ ತಮ್ಮ ಊರಿನ ಪ್ರಿಂಟಿಂಗ್ ಪ್ರೆಸ್‌ವೊಂದರಲ್ಲಿ ₹ 30 ನೀಡಿ 2019–20ರ ಪಾಸ್‌ ಎಂದು ಪ್ರಿಂಟ್ ಮಾಡಿಸಿ ಕೊಂಡಿದ್ದ.

ವಿದ್ಯಾರ್ಥಿ ಮತ್ತು ಪ್ರಿಂಟಿಂಗ್ ಪ್ರೆಸ್ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT