ಚಿಕಿತ್ಸೆ ನೆಪದಲ್ಲಿ ಮಹಿಳೆಯ ಮೈಮುಟ್ಟಿದ್ದ ನಕಲಿ ವೈದ್ಯ!

7

ಚಿಕಿತ್ಸೆ ನೆಪದಲ್ಲಿ ಮಹಿಳೆಯ ಮೈಮುಟ್ಟಿದ್ದ ನಕಲಿ ವೈದ್ಯ!

Published:
Updated:

ಬೆಂಗಳೂರು: ಆಯುರ್ವೇದ ವೈದ್ಯನ ನೆಪದಲ್ಲಿ ಮನೆಗಳಿಗೆ ಹೋಗಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದಡಿ ಮೊಹಮದ್ ಹಮೀದ್ ಖುರೇಷಿ (35) ಎಂಬಾತನನ್ನು ಬಂಧಿಸಿದ ಆರ್‌.ಟಿ.ನಗರ ಪೊಲೀಸರು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

‘ದೇವರಜೀವನಹಳ್ಳಿಯ ಶ್ಯಾಂಪುರ ನಿವಾಸಿಯಾದ ಖುರೇಷಿ ವಿರುದ್ಧ 28 ವರ್ಷದ ಮಹಿಳೆಯೊಬ್ಬರು ದೂರು ಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಮಧ್ಯಾಹ್ನದ ವೇಳೆ ಬೀದಿ ಬೀದಿ ಸುತ್ತುತ್ತಿದ್ದ ಈತ, ಮನೆ ಮುಂದೆ ಒಂಟಿ ಮಹಿಳೆಯರು ನಿಂತಿದ್ದರೆ ಬೈಕ್ ನಿಲ್ಲಿಸುತ್ತಿದ್ದ. ‘ನಾನು ಆಯುರ್ವೇದ ವೈದ್ಯ. ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಕಡಿಮೆ ಖರ್ಚಿನಲ್ಲಿ ಸರಿಪಡಿಸುತ್ತೇನೆ’ ಎನ್ನುತ್ತಿದ್ದ. ಒಂದು ವೇಳೆ ಚಿಕಿತ್ಸೆ ಪಡೆಯಲು ಮಹಿಳೆ ಒಪ್ಪಿದರೆ, ತಪಾಸಣೆ ನೆಪದಲ್ಲಿ ಮೈ–ಕೈ ಮುಟ್ಟಿ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಬೈಕ್‌ನಲ್ಲಿ ಸಾಗುವಾಗಲೂ ರಸ್ತೆಯಲ್ಲಿ ನಡೆದು ಹೋಗುವ ಒಂಟಿ ಮಹಿಳೆಯರ ಮೈ ಮುಟ್ಟಿ ದುರ್ವರ್ತನೆ ತೋರುತ್ತಿದ್ದ. ಇತ್ತೀಚೆಗೆ ಸ್ಥಳೀಯರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದರು. ಇದಾದ ಎರಡೇ ದಿನಗಳಲ್ಲಿ ಗಂಗಾನಗರದ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ನಡೆದುಕೊಂಡಿದ್ದ. ಅವರ ಮನೆ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಆರೋಪಿಯ ಬೈಕ್‌ನ ನೋಂದಣಿ ಸಂಖ್ಯೆ ಸಿಕ್ಕಿತು. ಆ ಸುಳಿವಿನಿಂದ ಆತನನ್ನು ಪತ್ತೆ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !