ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಉತ್ಪನ್ನ ಮಾರಾಟ | ಮೂವರ ಬಂಧನ: ₹ 95 ಲಕ್ಷ ಮೌಲ್ಯದ ಉತ್ಪನ್ನ ಜಪ್ತಿ

Published 8 ಮೇ 2024, 0:05 IST
Last Updated 8 ಮೇ 2024, 0:05 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಬಿದರಹಳ್ಳಿಯ ಶಿವಪಟೇಲ್ (40), ಟಿ.ಸಿ.ಪಾಳ್ಯದ ಐಶ್ವರ್ಯ ಬಡಾವಣೆಯ ದವಲತ್ ಸಿಂಗ್ (32) ಹಾಗೂ ಆಡುಗೋಡಿ ವಿನಾಯಕನಗರದ ಶುಭಂ ಗುಪ್ತಾ (20) ಬಂಧಿತರು. ಇವರಿಂದ ₹ 95 ಲಕ್ಷ ಮೌಲ್ಯದ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿನಾಯಕನಗರದಲ್ಲಿ ಗೋದಾಮು ತೆರೆದಿದ್ದ ಆರೋಪಿಗಳು, ನಕಲಿ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿದ್ದರು. ಸರ್ಫ್‌ ಎಕ್ಸೆಲ್, ವಿಮ್ ಲಿಕ್ವಿಡ್, ಲೈಫ್‌ ಬಾಯ್ ಹ್ಯಾಂಡ್ ವಾಶ್, ರಿನ್, ವೀಲ್ ಡಿಟರ್ಜೆಂಟ್ ಪೌಡರ್, ಬ್ರೂಕ್ ಬ್ರಾಂಡ್ ರೆಡ್ ಲೇಬಲ್ ಟೀ, ಲೈಜೋಲ್ ಹಾಗೂ ಹಾರ್ಪಿಕ್‌ ಹೆಸರಿನ ನಕಲಿ ಉತ್ಪನ್ನಗಳು ಗೋದಾಮಿನಲ್ಲಿದ್ದವು.’

‘ನಕಲಿ ಉತ್ಪನ್ನಗಳ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಆವಲಹಳ್ಳಿ ಬಳಿಯ ರಾಮಪುರ ಮತ್ತು ಬಿದರಹಳ್ಳಿ ಬಳಿಯ ಕಾರ್ಖಾನೆ ಹಾಗೂ ಗೋದಾಮು ಮೇಲೆ ದಾಳಿ ಮಾಡಲಾಯಿತು. ಉತ್ಪನ್ನ ತಯಾರಿಕೆಗೆ ಬಳಸುತ್ತಿದ್ದ ಉಪಕರಣಗಳನ್ನೂ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT