ಭಾನುವಾರ, ನವೆಂಬರ್ 28, 2021
20 °C

ಎಚ್‌ಎಸ್‌ಆರ್ ಬಡಾವಣೆಯ ಪಬ್‌ನಲ್ಲಿ ಗಲಾಟೆ: ಉದ್ಯಮಿ‌ ಸೇರಿ ಹಲವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಎಸ್‌ಆರ್ ಬಡಾವಣೆಯಲ್ಲಿರುವ‌ 'ಶಿಫ್ಟ್' ಪಬ್‌ನಲ್ಲಿ ಗಲಾಟೆ ನಡೆಸಿ ವ್ಯಕ್ತಿಯೊಬ್ಬರ‌ ಮೇಲೆ ಹಲ್ಲೆ‌ ಮಾಡಿರುವ ಆರೋಪದಡಿ ‌ಉದ್ಯಮಿ ರಾಹುಲ್‌ ರಾಜೀವ್ ಸೇರಿ ಹಲವರನ್ನು‌ ಪೊಲೀಸರು ಬಂಧಿಸಿದ್ದಾರೆ.

'ಆರೋಪಿ ರಾಹುಲ್‌ ಹಾಗೂ ಸ್ನೇಹಿತರು ಅ. 20ರಂದು ರಾತ್ರಿ ಪಬ್‌ಗೆ ಬಂದಿದ್ದರು‌. ಪಬ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿ ಜೊತೆ ಕ್ಷುಲಕ ಕಾರಣಕ್ಕೆ ಜಗಳ‌ ತೆಗೆದಿದ್ದರು' ಎಂದು ಪೊಲೀಸ್ ಮೂಲಗಳು‌ ಹೇಳಿವೆ.

'ವ್ಯಕ್ತಿಯನ್ನು ತಳ್ಳಾಡಿದ್ದ ಆರೋಪಿಗಳು, ಚಾಕುವಿನಿಂದ ಇರಿದಿದ್ದರು. ರಕ್ತ ಸೋರುತ್ತಿದ್ದರೂ ವ್ಯಕ್ತಿಯನ್ನು ಅಟ್ಟಿಸಿಕೊಂಡು ಪುನಃ ಹಲ್ಲೆ ಮಾಡಿದ್ದರು. ರಕ್ಷಣೆಗೆ ಬಂದ ಪಬ್ ಸಿಬ್ಬಂದಿ, ಗಲಾಟೆ ಬಿಡಿಸಿದ್ದರು. ರಾಹುಲ್‌ನಲ್ಲಿ ಪಬ್‌ನಿಂದ ಹೊರಗೆ ಕರೆತಂದಿದ್ದರು.'

'ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು‌ ನೀಡಿದ ಮಾಹಿತಿ ಆಧರಿಸಿ ಆಸ್ಪತ್ರೆಗೆ ಹೋದ ಸಿಬ್ಬಂದಿ, ಗಾಯಾಳು‌ ಹೇಳಿಕೆ ಪಡೆದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ‌ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ' ಎಂದೂ ಮೂಗಳು ತಿಳಿಸಿವೆ.

ಪ್ರಕರಣದ ‌ರಾಜಿಗೆ ಯತ್ನ
'ಬಂಧಿತ ಆರೋಪಿ ರಾಹುಲ್ ರಾಜೀವ್, ಶಾಸಕ ಎನ್.ಎ. ಹ್ಯಾರಿಸ್ ಪುತ್ರ‌ ಮೊಹಮ್ಮದ್ ನಲಪಾಡ್‌ನ ಸ್ನೇಹಿತ ಎಂದು ಹೇಳಲಾಗುತ್ತಿದೆ. ಪ್ರಕರಣವನ್ನು ರಾಜಿ‌ ಮಾಡಿ ಸ್ನೇಹಿತನನ್ನು ‌ಬಚಾವ್‌ ಮಾಡಿಸಲು ನಲಪಾಡ್ ಯತ್ನಿಸಿದ್ದರೆಂದು‌ ಪೊಲೀಸ್ ಮೂಲಗಳು‌ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು