ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಉಪ ನೋಂದಣಿ ಕಚೇರಿಗಳಲ್ಲಿ ರಜಾ ದಿನವೂ ನೋಂದಣಿ

Published 8 ಮಾರ್ಚ್ 2024, 16:33 IST
Last Updated 8 ಮಾರ್ಚ್ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ  ವರ್ಷ ಕೊನೆಗೊಳ್ಳುತ್ತಿರುವ ಹೊತ್ತಿನಲ್ಲಿ ನೋಂದಣಿ ವಹಿವಾಟಿನಲ್ಲಿ ಏರಿಕೆ ಆಗಿರುವುದರಿಂದ ನಗರದ ಐದು ಉಪ ನೋಂದಣಿ ಕಚೇರಿಗಳು ಈ ತಿಂಗಳ ಎಲ್ಲ ಶನಿವಾರ ಮತ್ತು ಭಾನುವಾರಗಳಂದು ತೆರೆದಿರಲಿವೆ.

ಇಂದಿರಾನಗರ, ಚಾಮರಾಜಪೇಟೆ, ರಾಜಾಜಿನಗರ, ಯಲಹಂಕ ಮತ್ತು ಜೆ.ಪಿ. ನಗರ ಉಪ ನೋಂದಣಿ ಕಚೇರಿಗಳನ್ನು ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ತೆರೆಯಲು ನೋಂದಣಿ ಮತ್ತು ಮುದ್ರಾಂಕ ಆಯುಕ್ತೆ ಬಿ.ಆರ್‌. ಮಮತಾ ಗುರುವಾರ ಆದೇಶ ಹೊರಡಿಸಿದ್ದಾರೆ.

ಮಾರ್ಚ್‌ 9 (ಎರಡನೇ ಶನಿವಾರ), ಮಾರ್ಚ್‌ 24 (ನಾಲ್ಕನೇ ಶನಿವಾರ) ಮತ್ತು ಮಾರ್ಚ್‌ 10, 17, 24, 31ರಂದು (ಎಲ್ಲವೂ ಭಾನುವಾರ) ಈ ಕಚೇರಿಗಳಲ್ಲಿ ನೋಂದಣಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT