ಕಲ್ಯಾಣ ಮಂಟಪದಲ್ಲೂ ಫ್ಲೆಕ್ಸ್‌ ಬಳಸದಂತೆ ಬಿಬಿಎಂಪಿ ಸೂಚನೆ

7
ಬಿಬಿಎಂಪಿ ಸೂಚನೆ

ಕಲ್ಯಾಣ ಮಂಟಪದಲ್ಲೂ ಫ್ಲೆಕ್ಸ್‌ ಬಳಸದಂತೆ ಬಿಬಿಎಂಪಿ ಸೂಚನೆ

Published:
Updated:

ಬೆಂಗಳೂರು: ಕಲ್ಯಾಣ ಮಂಟಪ ಹಾಗೂ ಸಭೆ ಸಮಾರಂಭಗಳ ವೇದಿಕೆಗಳಲ್ಲೂ ಫ್ಲೆಕ್ಸ್‌ ಬ್ಯಾನರ್‌ಗಳನ್ನು ಬಳಸಬಾರದು ಎಂದು ಬಿಬಿಎಂಪಿ ಸೂಚನೆ ನೀಡಿದೆ.

‘ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಯಾವುದೇ ಸಭೆ, ಸಮಾರಂಭಗಳನ್ನು ನಡೆಸುವಾಗ ವೇದಿಕೆಯ ಹಿಂಭಾಗದಲ್ಲಿ ಫ್ಲೆಕ್ಸ್‌ ಬ್ಯಾನರ್‌ ಹಾಕಬಾರದು. ಮಾಲ್‌ಗಳಲ್ಲಿ, ದೇವಸ್ಥಾನಗಳ ಕಾರ್ಯಕ್ರಮಗಳ ಮಾಹಿತಿ ನೀಡಲು, ಪ್ರಯಾಣಿಕರ ತಂಗುದಾಣಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಫ್ಲೆಕ್ಸ್‌ ಬ್ಯಾನರ್‌ ಬಳಸುವಂತಿಲ್ಲ’ ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !