ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ಕ್ಕೆ ಗಿರೀಶ್‌ ಕಾಸರವಳ್ಳಿ–ಗೋಪಾಲಕೃಷ್ಣ ಪೈ ಅವರ ‘ಬಿಂಬ ಬಿಂಬನ’ ಕೃತಿ ಬಿಡುಗಡೆ

Published 18 ಮಾರ್ಚ್ 2024, 15:50 IST
Last Updated 18 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ ಮತ್ತು ಚಿತ್ರಕಥಾ ಬರಹಗಾರರಾದ ಗೋಪಾಲಕೃಷ್ಣ ಪೈ ಅವರ ‘ಬಿಂಬ ಬಿಂಬನ’ ಕೃತಿ ಮಾರ್ಚ್‌ 24ರಂದು ಬೆಳಿಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್‌ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.

‘ವೀರಲೋಕ ಬುಕ್ಸ್‌’ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಟಿ–ನಿರ್ಮಾಪಕಿ ಜಯಮಾಲಾ ಕೃತಿ ಬಿಡುಗಡೆ ಮಾಡುವರು. ನಿರ್ದೇಶಕ ಪಿ. ಶೇಷಾದ್ರಿ ಉದ್ಘಾಟಿಸುವರು. ಕೃತಿ ಕುರಿತು ಸಿನಿಮಾ ಪತ್ರಕರ್ತ ಕೆ. ಪುಟ್ಟಸ್ವಾಮಿ, ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಮಾತನಾಡುವರು. ನಿರ್ದೇಶಕ ಬಿ.ಎಸ್. ಲಿಂಗದೇವರು ಅತಿಥಿಯಾಗಿರುವರು. ‘ವೀರಲೋಕ ಬುಕ್ಸ್‌’ ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಆಶಯ ನುಡಿಗಳನ್ನಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT