ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯೂ, ಆರೋಗ್ಯ ನೈರ್ಮಲ್ಯವೂ

Last Updated 20 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ರಿ ಯಲ್ ಎಸ್ಟೇಟ್‌ ಅಭಿವೃದ್ಧಿ ಸಂಸ್ಥೆ ಎಂಬೆಸಿ ಸಮೂಹ ಹಾಗೂ ಜಾಗತಿಕ ಆರೋಗ್ಯ ವೇದಿಕೆ ಮತ್ತು ನಾವಿನ್ಯತೆಯ ಕೇಂದ್ರ ಸರ್ನರ್ ಕಾರ್ಪೋರೇಷನ್ ಜಂಟಿಯಾಗಿ ನಗರದ 62 ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ಕಾರ್ಯಕ್ಕೆ ಮುಂದಾಗಿವೆ.

ಕಾರ್ಪೋರೇಟ್ ಸಂಪರ್ಕ ಕಾರ್ಯಕ್ರಮದ ಅಡಿ ಎಂಬೆಸಿ ಆಫೀಸ್ ಪಾರ್ಕ್ ವಿಶೇಷ ಗುರಿ ಹೊಂದಿದೆ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಎದುರಿಸಲು ತನ್ನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಆದೇಶಗಳು ಹಾಗೂ ಲಾಭರಹಿತ ಸೇವೆಯಲ್ಲಿ ತೊಡಗಿರುವ ಬ್ಯುಸಿನೆಸ್ ಪಾರ್ಕ್‌ನ ಬಾಡಿಗೆದಾರರನ್ನು ಒಗ್ಗೂಡಿಸಿ ಒಕ್ಕೂಟದ ಮೂಲಕ ಮುನ್ನಡೆಯಲು ನಿರ್ಧರಿಸಿದೆ.

2016ರಿಂದ ಸರ್ನರ್‌ ಮತ್ತು ಎಂಬೆಸಿ ಕಚೇರಿಗಳು ಉಚಿತ ಆರೋಗ್ಯ ತಪಾಸಣಾ ಸಭೆಗಳನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡಿವೆ. ಎಂಬೆಸಿಯು 14 ಸರ್ಕಾರಿ ಶಾಲೆಗಳನ್ನು ದತ್ತುಪಡೆದು 4 ಸಾವಿರ ವಿದ್ಯಾರ್ಥಿಗಳಿಗೆ ವೈದ್ಯಕೀಯ ದಾಖಲೆಗಳನ್ನು ಒದಗಿಸಿದೆ.
ಬೆಂಗಳೂರು ಉತ್ತರ ರೌಂಡ್ ಟೇಬಲ್ ಟ್ರಸ್ಟ್ ಜತೆ ಒಪ್ಪಂದ ಮಾಡಿಕೊಂಡು 14 ಸರ್ಕಾರಿ ಶಾಲೆಗಳಲ್ಲಿ ಏಳು ಹಂತದ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ಕಾರ್ಯಕ್ರಮ ಆರಂಭಿಸಿದೆ.

ಕಾಗ್ನಿಜೆಂಟ್ ಮತ್ತು ಕೇರ್‌ವರ್ಕ್ಸ್ ಫೌಂಡೇಶನ್‌ಗಳು ಒಕ್ಕೂಟಕ್ಕೆ ಸೇರ್ಪಡೆಯಾಗಿವೆ. ಕಾಗ್ನಿಜೆಂಟ್ ಸಂಸ್ಥೆ ತಮ್ಮ ಉದ್ಯೋಗಿ ಸ್ವಯಂಸೇವಕ ಕಾರ್ಯಕ್ರಮ ಔಟ್‌ರಿಚ್ ಮೂಲಕ, ಉದ್ದೇಶಿತ ಆರು ಸರ್ಕಾರಿ ಶಾಲೆಗಳಲ್ಲಿ 550 ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ನೈರ್ಮಲ್ಯ ಕಿಟ್‌ಗಳನ್ನು ವಿತರಿಸಿದೆ. ಕೇರ್‌ವರ್ಕ್ಸ್ ಫೌಂಡೇಶನ್ ಈ ಕೆಲವು ಶಾಲೆಗಳಲ್ಲಿ ಆರೋಗ್ಯ ತಪಾಸಣೆಯನ್ನು ಪ್ರಾಯೋಜಿಸಿದೆ.

‘ಶಾಲಾ ಆವರಣ ಮತ್ತು ಶೌಚಾಲಯಗಳ ದೈನಂದಿನ ನಿರ್ವಹಣೆ ಸೇರಿದಂತೆ ಅರ್ಥಪೂರ್ಣ ಮಧ್ಯಸ್ಥಿಕೆಗಳ ಮೂಲಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆರೋಗ್ಯ ಮತ್ತು ನೈರ್ಮಲ್ಯ ಸ್ಥಿತಿಗಳನ್ನು ಸುಧಾರಿಸಲು ಸೆರ್ನರ್, ಬಿಎನ್‌ಆರ್‌ಟಿ ಮತ್ತು ಕಾಂಗ್ನಿಜೆಂಟ್ ಜತೆ ಪಾಲುದಾರಿಕೆ ಹೊಂದಲು ಸಂತಸ ಪಡುತ್ತೇವೆ’ ಎನ್ನುತ್ತಾರೆಎಂಬೆಸಿ ಸಮೂಹದ ಸಿಒಒ ಆದಿತ್ಯ ವಿರ್ವಾನಿ.

‘ಸೆರ್ನರ್ ಮತ್ತು ಎಂಬೆಸಿ ಸಮೂಹ ಸೇರಿ ಸಮಗ್ರ ಶಾಲಾ ಆರೋಗ್ಯ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ. ಸರ್ಕಾರಿ ಶಾಲೆಗಳಿಂದ 4 ಸಾವಿರ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರಬಲ್ಲ ಉತ್ತಮ ಕೆಲಸ ಮಾಡಿದ್ದೇವೆ. ಈ ವರ್ಷ 2500 ಮಕ್ಕಳನ್ನು ಹೆಚ್ಚುವರಿಯಾಗಿ ತಲುಪುವ ಗುರಿ ಹೊಂದಿದ್ದೇವೆ. ಬೆಂಗಳೂರು ಉತ್ತರ ರೌಂಡ್ ಟೇಬಲ್ ಟ್ರಸ್ಟ್ ಅನ್ನು ಜತೆಯಾಗಿಸಿಕೊಳ್ಳಲು ಉತ್ಸುಕರಾಗಿದ್ದೇವೆ’ ಎನ್ನುತ್ತಾರೆಸೆರ್ನರ್ ಸಂಸ್ಥೆಯ ನಿರ್ದೇಶಕ ಕಿಶನ್ ಶ್ರೀನಿವಾಸ್.

‘ಸರ್ಕಾರಿ ಶಾಲಾ ಮಕ್ಕಳು ಸಕಾರಾತ್ಮಕ ಆರೋಗ್ಯ ಸ್ಥಿತಿಯನ್ನು ಹೊಂದಲು ಆರಂಭಿಸಿರುವ ಈ ಅದ್ಭುತ ಉಪಕ್ರಮಕ್ಕಾಗಿ ಕೈಜೋಡಿಸಲು ಸಂತೋಷವಾಗುತ್ತದೆ. ಇದು ದೀನ ದಲಿತ ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯ ಸಾಧಿಸಲು ಸಮಗ್ರ ವಾತಾವರಣ ಸೃಷ್ಟಿಸುವ ಉದ್ದೇಶದ ಸ್ವಾಭಾವಿಕ ವಿಸ್ತರಣೆ’ ಎನ್ನುತ್ತಾರೆ ಬೆಂಗಳೂರು ಉತ್ತರ ರೌಂಡ್ ಟೇಬಲ್ ಟ್ರಸ್ಟ್‌ ಅಧ್ಯಕ್ಷ ರಾಜ್ ಕಿರಣ್.

ಕಳೆದ ವರ್ಷ, ಎಂಬೆಸಿ ಸಮೂಹ ಮತ್ತು ಸೆರ್ನರ್ ಸಂಸ್ಥೆ ಜಂಟಿಯಾಗಿ 3734 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಪೂರೈಸಿವೆ. ಆರೋಗ್ಯ ಕಿಟ್ ಒದಗಿಸಿವೆ. ದತ್ತು ಪಡೆದ 14 ಸರ್ಕಾರಿ ಶಾಲೆಗಳಲ್ಲಿ 141 ಶೌಚಾಲಯಗಳ ದೈನಂದಿನ ನಿರ್ವಹಣೆಗೆ ಕೈಜೋಡಿಸಿವೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT