ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ರೂಪಿಸದೆಯೇ ಉದ್ಯಾನ ನಿರ್ಮಾಣ

ಜಾರಕಬಂಡೆ ಕಾವಲು ಪ್ರದೇಶದ 353 ಎಕರೆ ಪ್ರದೇಶದ ಪರಿವರ್ತನೆ l ಪರಿಸರವಾದಿಗಳ ಅಸಮಾಧಾನ
Last Updated 20 ಅಕ್ಟೋಬರ್ 2022, 21:20 IST
ಅಕ್ಷರ ಗಾತ್ರ

ಬೆಂಗಳೂರು: ಜಾರಕಬಂಡೆ ಕಾವಲು ಪ್ರದೇಶದಲ್ಲಿ ‘ಅಭಿವೃದ್ಧಿಯ ಯೋಜನೆ’ ರೂಪಿಸದೆಯೇ ತೋಟಗಾರಿಕೆ ಇಲಾಖೆ ಉದ್ಯಾನ ನಿರ್ಮಿಸಲು ಮುಂದಾಗಿದೆ.

ಇಲಾಖೆಯ ಈ ಕ್ರಮಕ್ಕೆ ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿನ 353 ಎಕರೆ ಅರಣ್ಯ ಭೂಮಿಯನ್ನು ಉದ್ಯಾನವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

‘ಜಾರಕಬಂಡೆ ಕಾವಲ್‌ ಪ್ರದೇಶದಲ್ಲಿ ಉದ್ದೇಶಿತ ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನ ನಿರ್ಮಿಸಲು ಇದುವರೆಗೆ ಯಾವುದೇ ರೀತಿಯ ಅಭಿವೃದ್ಧಿ ಯೋಜನೆ ರೂಪಿಸಿಲ್ಲ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರುತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ ವಿವರಗಳಿಗೆ ಜಂಟಿ ನಿರ್ದೇಶಕರು ಈ ಮಾಹಿತಿ ನೀಡಿದ್ದಾರೆ.

ಜಾರಕಬಂಡೆ ಕಾವಲ್‌ನ ಮೀಸಲು ಅರಣ್ಯದಲ್ಲಿ ತೋಟಗಾರಿಕಾ ಇಲಾಖೆಯು ಮರಗಳ ಉದ್ಯಾನ ನಿರ್ಮಿಸಲು ಮುಂದಾಗಿದೆ. ಈ ಮೀಸಲು ಅರಣ್ಯದ ಒಂದು ಭಾಗದಲ್ಲಿ ಈಗಾಗಲೇ ’ಟ್ರೀ ಪಾರ್ಕ್‌’ ನಿರ್ಮಾಣವಾಗಿದೆ. ಆದರೆ, ಸರ್ಕಾರ ಮೊದಲು ಅರಣ್ಯದಲ್ಲಿ ಜೀವ ವೈವಿಧ್ಯದ ಬಗ್ಗೆ ಅಧ್ಯಯನ ಮಾಡಿ ಸಮಗ್ರವಾದ ಯೋಜನೆ ರೂಪಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

’ರಿಯಲ್‌ ಎಸ್ಟೇಟ್‌ಗೆ ಅನುಕೂಲ ಮಾಡಿಕೊಡುವಯೋಜನೆ ಇದಾಗಿದೆ ಎಂದು ಅನಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಉದ್ಯಾನ ನಿರ್ಮಾಣವನ್ನು ಯಾವ ಉದ್ದೇಶಕ್ಕೆ ಮಾಡಲಾಗುತ್ತಿದೆ. ಅರಣ್ಯವು ಅರಣ್ಯ ಪ್ರದೇಶವಾಗಿಯೇ ಉಳಿಯಬೇಕಲ್ಲವೇ? ಯಾವುದೇ ಪ್ರಯೋಜನ ಇಲ್ಲದ ಯೋಜನೆ ನಮಗೆ ಏಕೆ ಬೇಕು. ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಿ ಚರ್ಚೆ ನಡೆಸಲಿ. ಯೋಜನೆ ಉಪಯುಕ್ತವಾಗಿದ್ದರೆ ಮುಂದುವರಿಯಲಿ’ ಎಂದು ಪರಿಸರ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

‘ಈ ಪ್ರದೇಶದಲ್ಲಿ ನೀಲಗಿರಿ ಗಿಡಗಳು ಇರುವ ಬಗ್ಗೆಯೂವಿವರ ನೀಡಲಿ. ಬೆಂಗಳೂರು ಸುತ್ತಮುತ್ತ ಅರಣ್ಯ ಪ್ರದೇಶ ಈಗಾಗಲೇ ಕಡಿಮೆಯಾಗಿದೆ. ಈಗ ಮತ್ತೆ ಜೀವವೈವಿಧ್ಯ ನಾಶಪಡಿಸುವ ಪ್ರಯತ್ನ ಗಳನ್ನು ಸರ್ಕಾರ ಮಾಡಬಾರದು. ಉದ್ಯಾನ ನಿರ್ಮಾಣದಿಂದ ಈ ಪ್ರದೇಶದ ಜೀವ ವೈವಿಧ್ಯಕ್ಕೆ ಮತ್ತು ಅರಣ್ಯಕ್ಕೆ ಯಾವ ರೀತಿಯಲ್ಲೂ ಧಕ್ಕೆ
ಯಾಗುವುದಿಲ್ಲ ಎನ್ನುವ ಮಾಹಿತಿ ಯನ್ನು ಬಹಿರಂಗಪಡಿಸಲಿ. ಆದರೆ, ಇಲಾಖೆ ಯಾವುದೇ ರೀತಿ ಯೋಜನೆ ರೂಪಿಸಿಲ್ಲ ಎಂದು ಉತ್ತರ ನೀಡಲಾಗಿದೆ. ಯೋಜನೆ ರೂಪಿಸ ದೆಯೇ ಉದ್ಯಾನ ನಿರ್ಮಿಸಲು ಮುಂದಾಗಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT