ಗುರುವಾರ , ಮಾರ್ಚ್ 30, 2023
32 °C

ಹಲ್ಲೆ ಆರೋಪ: ಹ್ಯಾಕರ್ ಶ್ರೀಕೃಷ್ಣ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ನಗರದ ಹೋಟೆಲೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು (26) ಜೀವನ್‌ ಭಿಮಾ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಶ್ರೀಕೃಷ್ಣ ಹಾಗೂ ಆತನ ಸ್ನೇಹಿತ ವಿಷ್ಣು ಭಟ್, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನೂ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರೊಬ್ಬರು ತಿಳಿಸಿದರು.

‘ಆರಂಭದಲ್ಲಿ ಶ್ರೀಕೃಷ್ಣನ ಹೆಸರು ಹಾಗೂ ಆತ ಯಾರು? ಎಂಬುದು ತಿಳಿದಿರಲಿಲ್ಲ. ವಿಚಾರಿಸಿದಾಗ ಅಂತರ
ರಾಷ್ಟ್ರೀಯ ಹ್ಯಾಕರ್ ಎಂಬುದು ತಿಳಿಯಿತು. ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಮಾಹಿತಿಯೂ ಲಭ್ಯವಾಯಿತು’ ಎಂದೂ ತಿಳಿಸಿದರು. 

‘ತನ್ನ ವಿರುದ್ಧದ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದ ಶ್ರೀಕೃಷ್ಣ, ಸ್ನೇಹಿತರ ಜೊತೆ ಸುತ್ತಾಡುತ್ತಿದ್ದ. ಐಷಾರಾಮಿ ಹೋಟೆಲ್‌ಗಳ ಕೊಠಡಿಗಳಲ್ಲಿ ಉಳಿದುಕೊಳ್ಳುತ್ತಿದ್ದ’ ಎಂದೂ ಹೇಳಿದರು.

ಆರೋಪಿಗಳು ವಾಸವಿದ್ದ ಕೊಠಡಿಯಲ್ಲಿ ಮಾದಕ ವಸ್ತುಗಳು ಇರುವ ಮಾಹಿತಿ ಇದ್ದು, ಈ ಬಗ್ಗೆ ಪೊಲೀಸರು ಪರಿಶೀಲಿ
ಸುತ್ತಿದ್ದಾರೆ. ‘ಶ್ರೀಕೃಷ್ಣ ವಾಸವಿದ್ದ ಕೊಠಡಿಯಲ್ಲಿ ಕೆಲ ವಸ್ತುಗಳು ಸಿಕ್ಕಿದ್ದು, ತನಿಖೆ ಮುಂದುವರಿದಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು