ಕ್ಯಾನ್ಸರ್‌ ರೋಗಿಗಳಿಗೆ ಕೇಶ ನೀಡಿದರು!

7
ಮೌಂಟ್‌ ಕಾರ್ಮೆಲ್‌ ಕಾಲೇಜು

ಕ್ಯಾನ್ಸರ್‌ ರೋಗಿಗಳಿಗೆ ಕೇಶ ನೀಡಿದರು!

Published:
Updated:
Deccan Herald

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡವರಿಗೆ ಕೇಶರಾಶಿಯನ್ನೇ ನೀಡುವ ಮೂಲಕ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿನಿಯರು, ರೋಗಿಗಳ ಬಾಳಲ್ಲಿ ಹೊಂಗನಸುನ್ನು ಬಿತ್ತುವ ಕೆಲಸ ಮಾಡಿದ್ದಾರೆ.

ಕ್ಯಾನ್ಸರ್‌ ಎಂದಾಗಲೇ ಮಾನಸಿಕವಾಗಿ ಕುಗ್ಗಿಹೋಗುವ ರೋಗಿಗಳು, ಕಿಮೋಥೆರಪಿಯಲ್ಲಿ ಕೂದಲು ಕಳೆದುಕೊಂಡಾಗ ಸಂಪೂರ್ಣ ಖಿನ್ನತೆಗೆ ಒಳಗಾಗುತ್ತಾರೆ. ಅಂಥವರಿಗೆ ಮನೋಸ್ಥೈರ್ಯವನ್ನು ತುಂಬಿದ್ದಾರೆ ವಿದ್ಯಾರ್ಥಿನಿಯರು.

‘ಗಿಫ್ಟ್ ಹೇರ್, ಗಿಫ್ಟ್ ಕಾನ್ಫಿಡೆನ್ಸ್’ ಅನ್ನೋ ಹೆಸರಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಕೂದಲು ದಾನದ ಬಗ್ಗೆ ಅರಿವು ಮೂಡಿಸಲಾಯಿತು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ತಮ್ಮ ಕೂದಲು ದಾನ ಮಾಡಿದರು.

8ರಿಂದ 10 ಇಂಚು ಕೂದಲು ದಾನ ಮಾಡುವ ಹುಡುಗಿಯರ ನಡುವೆ ಸಂಪೂರ್ಣ ಕೂದಲು ನೀಡಿದ ದ್ರುತಿ ಎನ್ನುವ ವಿದ್ಯಾರ್ಥಿನಿ ವಿಶೇಷ ಎನಿಸಿದರು. ‘ಒಂದು ಉತ್ತಮ ಉದ್ದೇಶಕ್ಕಾಗಿ ನನ್ನ ಕೂದಲು ದಾನ ಮಾಡಿರುವುದು ಖುಷಿ ಇದೆ. ನನ್ನನ್ನು ನೋಡಿ ಇನ್ನಷ್ಟು ಜನ ಕೂದಲು ನೀಡುವಂತಾಗಬೇಕು’ ಎಂದು ದ್ರುತಿ ಹೇಳಿದರು.

ಚೆರಿಯನ್‌ ಫೌಂಡೇಶನ್ ಸಂಸ್ಥೆಗೆ ಆ ಕೂದಲುಗಳನ್ನು ನೀಡಲಾಯಿತು. ಈ ಸಂಸ್ಥೆ ಕೂದಲು ಕಳೆದು ಕೊಂಡಿರುವವರಿಗೆ ವಿಗ್‌ ವಿನ್ಯಾಸಪಡಿಸಿ ನೀಡಲಿದೆ.

ಬರಹ ಇಷ್ಟವಾಯಿತೆ?

 • 31

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !