ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿಮಾನ ನಿಲ್ದಾಣವನ್ನು ಪುನರಾರಂಭಿಸುವ ಕುರಿತು ಚರ್ಚಿಸಲು ಮುಂದಿನ ವಾರ ಸಭೆ ಕರೆಯಲಾಗುವುದು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

‘ಮಾರ್ಚ್ ಎರಡನೇ ವಾರದಲ್ಲಿ ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಮತ್ತು ಎಚ್ಎಎಲ್ನ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಳೆಯ ವಿಮಾನ ನಿಲ್ದಾಣವನ್ನು ಪುನರಾರಂಭಿಸುವುದರಿಂದ ಬೆಂಗಳೂರಿಗೆ ಹಲವು ರೀತಿಯಲ್ಲಿ ಸಹಾಯವಾಗಲಿದೆ. ನಗರದ ಹೃದಯ ಭಾಗದಲ್ಲಿ ವಾಣಿಜ್ಯ ವಿಮಾನ ನಿಲ್ದಾಣದ ಸೌಲಭ್ಯವನ್ನು ಕಲ್ಪಿಸಲಿದೆ. ಬಿಐಎಎಲ್ನ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಎಚ್ಎಎಲ್ಗೆ ಆದಾಯ ಹರಿದು ಬರಲಿದೆ. ಜೊತೆಗೆ ಬಿಐಎಎಲ್ಗೂ ಹೆಚ್ಚುವರಿ ಆದಾಯ ಸೃಷ್ಟಿಯಾಗಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಎಚ್ಎಎಲ್ ವಿಮಾನ ನಿಲ್ದಾಣವನ್ನು ಮತ್ತೆ ಆರಂಭಿಸಿ ರಾಜ್ಯ ಮತ್ತು ಅಂತರರಾಜ್ಯಗಳ ನಡುವೆ ವಿಮಾನ ಯಾನ ಆರಂಭಿಸಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ.

ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಐಎಎಲ್ ಮೂಲಕ 2008ರಲ್ಲಿ ಆರಂಭಿಸಲಾಗಿತ್ತು. ವಿಧಾನಸೌಧದಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಎಚ್ಎಎಲ್ ವಿಮಾನ ನಿಲ್ದಾಣವು ಅಲ್ಲಿಯವರೆಗೆ ಕಾರ್ಯನಿರ್ವಹಿಸಿತ್ತು. ಮತ್ತೆ ಆರಂಭಿಸಲು ಎಚ್ಎಎಲ್, ಬಿಐಎಎಲ್ ಮಾತ್ರವಲ್ಲ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಕೂಡ ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಎಚ್ಎಎಲ್ ವಿಮಾನ ನಿಲ್ದಾಣವು ದೇಶೀಯ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸಬಹುದು. ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳನ್ನು ಒಳಗೊಂಡ ಪ್ರಾದೇಶಿಕ ಪ್ರಯಾಣವನ್ನು ಉತ್ತೇಜಿಸಬಹುದು. ವ್ಯಾಪಾರಕ್ಕಾಗಿ ಬೆಂಗಳೂರಿಗೆ ಭೇಟಿ ನೀಡುವ ಜನರು ವೈಟ್ಫೀಲ್ಡ್ ಅಥವಾ ಸುತ್ತಲಿನ ಪ್ರದೇಶಗಳಲ್ಲಿ ತಮ್ಮ ಕೆಲಸವನ್ನು ಮುಗಿಸಿ ತಕ್ಷಣ ಹೊರಡಬಹುದು ಎಂದು ವಿವರಿಸಿದ್ದಾರೆ.

ಎಚ್ಎಎಲ್ ವಿಮಾನ ನಿಲ್ದಾಣವನ್ನು ಮತ್ತೆ ಆರಂಭಿಸುವ ಕುರಿತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮನವಿ ಮಾಡಿರುವುದಾಗಿ ಎರಡು ತಿಂಗಳ ಹಿಂದೆ ತೇಜಸ್ವಿ ಸೂರ್ಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

ಬಳಸಿಕೊಳ್ಳಬಹುದು: ‘ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಾಗ ಮುಂದಿನ 25 ವರ್ಷ ಈ ವಿಮಾನ ನಿಲ್ದಾಣದಿಂದ 150 ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ವಿಮಾನ ನಿಲ್ದಾಣ ಇರಬಾರದು ಎಂಬ ಒಪ್ಪಂದ ಆಗಿತ್ತು. 2033ಕ್ಕೆ 25 ವರ್ಷದ ಗಡುವು ಮುಗಿಯಲಿದೆ. ಅದರೊಳಗೆ ಎಚ್ಎಎಲ್ ಅನ್ನು ತಯಾರು ಮಾಡಬಹುದು’ ಎಂದು ನಗರ ಯೋಜನಾ ತಜ್ಞರಾದ ವಿ. ರವಿಚಂದರ್ ತಿಳಿಸಿದ್ದಾರೆ.

ಎಚ್ಎಎಲ್ನಲ್ಲಿ ವಿಮಾನ ನಿಲ್ದಾಣಕ್ಕೆ ಬೇಕಾದ ಎಲ್ಲ ಸೌಕರ್ಯಗಳು ಈಗಾಗಲೇ ಇರುವುದರಿಂದ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅಲ್ಪಾವಧಿಯ ಪ್ರಯಾಣವನ್ನು ಏರ್ಪಡಿಸಬಹುದು. ಪಾಯಿಂಟ್-ಟು-ಪಾಯಿಂಟ್ ಪ್ರಯಾಣದಿಂದ ಸಮಯದ ಉಳಿಯವಾಗಲಿದೆ. ಹೆಬ್ಬಾಳ ಮೇಲ್ಸೇತುವೆ ಕಡೆಗೆ ಇರುವ ವಾಹನ ದಟ್ಟಣೆ, ಜನದಟ್ಟಣೆಯೂ ಕಡಿಮೆಯಾಗಬಹುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಎಚ್ಎಎಲ್ ವಿಮಾನ ನಿಲ್ದಾಣ ಆರಂಭಗೊಂಡರೆ ಮೈಸೂರು–ಬೆಂಗಳೂರು ನಡುವೆ ಸಂಚಾರಕ್ಕೂ ಉಪಯೋಗವಾಗಬಹುದು. ಮಹದೇವಪುರ, ಎಚ್ಎಸ್ಆರ್ ಲೇಔಟ್ ಮತ್ತು ಬೊಮ್ಮನಹಳ್ಳಿಯಂತಹ ಪ್ರದೇಶಗಳ ಜನರಿಗೆ ಸಹಾಯವಾಗಬಹುದು ಎಂದು ಸ್ಥಳೀಯ ನಿವಾಸಿ ಅಶ್ವಿನ್ ಮಹೇಶ್ ತಿಳಿಸಿದರು.

ಮುಚ್ಚುವುದು ವಿವೇಕದ ನಿರ್ಧಾರವಲ್ಲ

‘ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚುವುದು ವಿವೇಕಯುತ ಆಲೋಚನೆಯಲ್ಲ. ಹಳೆಯ ವಿಮಾನ ನಿಲ್ದಾಣವನ್ನು ಮುಚ್ಚಬಾರದು ಎಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರಲ್ಲಿ ನಾನೂ ಒಬ್ಬ. ಆದರೆ ನ್ಯಾಯಾಲಯವು ತಡೆಯಾಜ್ಞೆ ನೀಡಿರಲಿಲ್ಲ’ ಎಂದು ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಪ್ರತಿಕ್ರಿಯಿಸಿದರು. ಎಚ್ಎಎಲ್ ವಿಮಾನನಿಲ್ದಾಣವು ನಗರದ ನಡುವೆ ಇರುವುದರಿಂದ ದಟ್ಟಣೆಯಿಂದ ಕೂಡಿತ್ತು. ಆದರೆ ಸಣ್ಣಮಟ್ಟದ ಪ್ರಯಾಣಕ್ಕೆ ಬಳಸಿಕೊಳ್ಳಬಹುದಿತ್ತು. ಇಲ್ಲಿ ಆಧುನಿಕ ವಿಮಾನ ನಿಲ್ದಾಣಕ್ಕೆ ಪೂರಕವಾದ ಸೌಲಭ್ಯಗಳಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.