ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮಾಜಿ ಮೇಯರ್ ಮನೆಯಲ್ಲಿ ಕಳ್ಳತನ: ಪ್ರಕರಣ ದಾಖಲು

Published 21 ಏಪ್ರಿಲ್ 2024, 16:14 IST
Last Updated 21 ಏಪ್ರಿಲ್ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಎಂ.ವಿ 2ನೇ ಹಂತದಲ್ಲಿರುವ ಮಾಜಿ ಮೇಯರ್ ಆರ್. ನಾರಾಯಣಸ್ವಾಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಾರಾಯಣಸ್ವಾಮಿ ಅವರ ಮನೆಯಲ್ಲಿ ಇತ್ತೀಚೆಗೆ ನಡೆದಿರುವ ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿಯಾಗಿದ್ದ ನೇಪಾಳದ ವ್ಯಕ್ತಿಯೇ ಕಳ್ಳತನ ಮಾಡಿರುವ ಅನುಮಾನವಿದೆ. ಸದ್ಯ ಈತ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲ ದಿನಗಳ ಹಿಂದೆಯಷ್ಟೇ ನೇಪಾಳದ ವ್ಯಕ್ತಿ ಕೆಲಸಕ್ಕೆ ಸೇರಿಕೊಂಡಿದ್ದ. ಮನೆಯಲ್ಲಿ ಚಿನ್ನಾಭರಣ, ನಗದು ಇರುವುದನ್ನು ನೋಡಿದ್ದ. ಹೀಗಾಗಿ, ಸಂಚು ರೂಪಿಸಿ ಕಳ್ಳತನ ಮಾಡಿರುವ ಶಂಕೆ ಇದೆ’ ಎಂದು ತಿಳಿಸಿವೆ.

‘ನಾರಾಯಣಸ್ವಾಮಿ ಮನೆಯವರೆಲ್ಲ ಇತ್ತೀಚೆಗೆ ಹೊರಗಡೆ ಹೋಗಿದ್ದರು. ಇದೇ ಸಂದರ್ಭದಲ್ಲಿಯೇ ಆರೋಪಿ, ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ. ₹ 99.75 ಲಕ್ಷ ಮೌಲ್ಯದ 1 ಕೆ.ಜಿ 425 ಗ್ರಾಂ ಚಿನ್ನಾಭರಣ, ₹ 18.92 ಲಕ್ಷ ಮೌಲ್ಯದ 22 ಕೆ.ಜಿ ಬೆಳ್ಳಿ ಸಾಮಗ್ರಿ, ₹ 6.50 ಲಕ್ಷ ಮೌಲ್ಯದ ಮೂರು ಕೈ ಗಡಿಯಾರಗಳು ಹಾಗೂ ₹ 1.29 ಲಕ್ಷ ನಗದು ಕಳ್ಳತನ ಆಗಿರುವುದಾಗಿ ದೂರುದಾರರು ತಿಳಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT