ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಗತಿಕರನ್ನು ಗುರುತಿಸಲು ಸಮೀಕ್ಷೆ

ಬಿಬಿಎಂಪಿ ಜತೆ ಕೈಜೋಡಿಸಿದ ಇಂಡೋ ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ
Last Updated 13 ಡಿಸೆಂಬರ್ 2018, 20:29 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕಾರಣಗಳಿಗಾಗಿ ಮನೆಯಿಂದ ಹೊರಬಿದ್ದು, ಹೆದ್ದಾರಿಯಲ್ಲಿ ಲಾರಿ ಹಿಡಿದುನಗರಕ್ಕೆ ಬಂದು, ರೈಲ್ವೆ ನಿಲ್ದಾಣ, ಸುರಂಗ ಮಾರ್ಗ, ಬಸ್‌ ನಿಲ್ದಾಣ ಹಾಗೂಪಾದಚಾರಿ ಮಾರ್ಗಗಳನ್ನೇ ಮನೆಯಾಗಿ ಮಾಡಿಕೊಂಡು ಜೀವನ ಸಾಗಿಸು
ತ್ತಿರುವ ನಿರ್ಗತಿಕರ ಕುರಿತುಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಈ ಕಾರ್ಯಕ್ಕೆ ವಸತಿರಹಿತರ ಪರವಾಗಿ ಕಾರ್ಯನಿರ್ವಹಿಸುತ್ತಿರುವಇಂಡೋ ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ ಬಿಬಿಎಂಪಿಯ ಜೊತೆಕೈಜೋಡಿಸಿದೆ.

ಸಮೀಕ್ಷೆ ನಡೆಸಲುತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮೂರು ದಿನಗಳ ಕಾಲ ನಗರದ ಕೆ.ಆರ್ ಮಾರ್ಕೆಟ್‌, ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಕಾಟನ್‌ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಸತಿರಹಿತರನ್ನು ಗುರುತಿಸಿ ಅವರನ್ನುಸಂದರ್ಶಿಸಲಿವೆ.

ನಿರ್ಗತಿಕರವಿವರಗಳನ್ನು ಪಡೆದುಕೊಂಡು ಅಂಕಿ–ಅಂಶಗಳನ್ನು ಪಾಲಿಕೆಗೆ ಸಲ್ಲಿಸುತ್ತದೆ. ಅದನ್ನುಅಧ್ಯಯನ ಮಾಡಿದ ಬಳಿಕ ಬಿಬಿಎಂಪಿ, ನಿರಾಶ್ರಿತರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸಲಿದೆ.

ಹಿಂದೆಯೂ ಸಮೀಕ್ಷೆ ನಡೆದಿತ್ತು: 2010ರಲ್ಲಿ ಸುಪ್ರೀಂಕೋರ್ಟ್‌ ನಿರ್ಗತಿಕರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತ್ತು. ಸರ್ಕಾರೇತರ ಸಂಸ್ಥೆಯೊಂದುಸಮೀಕ್ಷೆ ಮಾಡಿದಾಗ ನಗರದಲ್ಲಿ 17000 ನಿರ್ಗತಿಕರಿರುವುದು ಕಂಡು ಬಂದಿತ್ತು. ‌ಆಗಬಿಬಿಎಂಪಿ ಕೆಲವೇ ಜನರಿಗೆ ರಾತ್ರಿ ಮಲಗಲು ವ್ಯವಸ್ಥೆ ಮಾಡಿಕೈತೊಳೆದುಕೊಂಡಿತ್ತು. ಈಗ ಮತ್ತೆ ಸಮೀಕ್ಷೆ ಮಾಡಿಸಲು ಮುಂದಾಗಿದೆ.

‘ಮೊದಲಿನಿಂದಲೂ ವಸತಿರಹಿತರನ್ನು ಗುರುತಿಸಿ ಅವರಿಗೆ ಸೂರು ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಪಾಲಿಕೆ ನಗರದಲ್ಲಿರುವನಿರಾಶ್ರಿತರನ್ನು ಗುರುತಿಸಿ ನೆರಳಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ನಾವು ಅದರಭಾಗವಾಗುತ್ತಿರುವುದು ಖುಷಿ ತಂದಿದೆ’ ಎನ್ನುತ್ತಾರೆಇಂಡೋ ಗ್ಲೋಬಲ್ ಸೋಷಿಯಲ್ ಸರ್ವಿಸ್ ಸೊಸೈಟಿ ಸಂಸ್ಥೆಯರಜನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT