ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು ಪ್ರಕರಣದಲ್ಲಿ ಹನಿಟ್ರ್ಯಾಪ್‌ ಕಿಂಗ್‌ಪಿನ್ ಆರತಿ ದಯಾಳ್ ಬಂಧನ

Published 13 ಸೆಪ್ಟೆಂಬರ್ 2023, 16:20 IST
Last Updated 13 ಸೆಪ್ಟೆಂಬರ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯಪ್ರದೇಶದ ಇಂದೋರ್‌ನಲ್ಲಿ ‘ಹನಿಟ್ರ್ಯಾಪ್ ಕಿಂಗ್‌ಪಿನ್‌’ ಎಂದೇ ಕರೆಯಲಾಗುತ್ತಿದ್ದ ಮಹಿಳೆಯನ್ನು ಚಿನ್ನಾಭರಣ ಕಳವು ಪ್ರಕರಣದಲ್ಲಿ ನಗರದ ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರತಿ ದಯಾಳ್ ಬಂಧಿತ ಆರೋಪಿ.‌ ವಿಜಯವಾಡದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

‘ಒಂದು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರತಿ ಪಿಜಿಯಲ್ಲಿ ನೆಲೆಸಿದ್ದರು. ಈಕೆ ಸ್ನೇಹಿತೆಯ ಚಿನ್ನದ ಸರವನ್ನೇ ಕಳವು ಮಾಡಿದ್ದಳು. ಚಿನ್ನಾಭರಣ ಕಳವು ನಂತರ ಪಿ.ಜಿ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆಕೆ ವಿರುದ್ಧ ಇಂದೋರ್‌ನ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ಮಧ್ಯಪ್ರದೇಶ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.’

‘ರಾಜಕೀಯ ನಾಯಕರಿಗೆ ಗಾಳ ಹಾಕಿ ಹನಿಟ್ರ್ಯಾಪ್‌ ನಡೆಸಿ ವಂಚಿಸುತ್ತಿದ್ದಳು. ಅಲ್ಲಿನ ಪುರಸಭೆಯ ಎಂಜಿನಿಯರ್‌ಗೆ ಹನಿಟ್ರ್ಯಾಪ್​ಗೆ ಬಲೆಗೆ ಬೀಳಿಸಿ ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. 2019ರಲ್ಲಿ ಈಕೆಯನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನು ಮೇಲೆ ಹೊರಬಂದಿದ್ದಳು. ಪೊಲೀಸರು ಹುಡುಕಾಟ ಆರಂಭಿಸಿದ ಮೇಲೆ ಕರ್ನಾಟಕಕ್ಕೆ ಪರಾರಿಯಾಗಿದ್ದಳು. ಚೆನ್ನೈಗೂ ತೆರಳಿ ಅಲ್ಲಿನ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲೂ ಶ್ರೀಮಂತ ಹುಡುಗಿಯರ ಸ್ನೇಹ ಸಂಪಾದಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದಳು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT