‘ಆರೋಪಿ ರಾಜೇಂದ್ರ, ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಫುಟ್ಪಾತ್ ಮೇಲೆ ಏರಿಸಿ ಜನರಿಗೆ ಡಿಕ್ಕಿ ಹೊಡೆಸಿದ್ದ. ನಂತರ, ಹೋಟೆಲ್ ಒಳಗೆ ಕಾರು ನುಗ್ಗಿಸಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಏಳು ಮಂದಿ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಅದರಲ್ಲಿ ಒಬ್ಬರು, ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿದ್ದಾರೆ’ ಎಂದರು.