ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾ ಎಂದಿಗೂ ಆಟದ ಮೈದಾನ: ಶಾಸಕ ಜಮೀರ್ ಅಹಮದ್‌ ಘೋಷಣೆ

ಸ್ವಾತಂತ್ರ್ಯೋತ್ಸವಕ್ಕೆ ಧ್ವಜಾರೋಹಣ: ಶಾಸಕ ಜಮೀರ್ ಅಹಮದ್‌ ಘೋಷಣೆ
Last Updated 8 ಜುಲೈ 2022, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಚಾಮರಾಜಪೇಟೆಯ ಈದ್ಗಾ ಮೈದಾನವು ಆಟದ ಮೈದಾನವಾಗಿಯೇ ಉಳಿಯುತ್ತದೆ. ಯಾರಿಂದಲೂ ಮೈದಾನ ಇಲ್ಲವಾಗಿಸಲು ಸಾಧ್ಯವಿಲ್ಲ’ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

ಚಾಮರಾಜಪೇಟೆ ಬಂದ್‌ಗೆ ಜುಲೈ
12ರಂದು ಕರೆ ನೀಡಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ನಾಗರಿಕರ ಶಾಂತಿ–ಸೌಹಾರ್ದ ಸಭೆಯಲ್ಲಿ ಶುಕ್ರವಾರ ಅವರು
ಮಾತನಾಡಿ, ‘ಈ ವರ್ಷ ಆಗಸ್ಟ್‌ 15ರಂದು ಪ್ರಥಮ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಈದ್ಗಾ ಮೈದಾನ
ದಲ್ಲಿ ಧ್ವಜಾರೋಹಣ ಮಾಡುತ್ತೇವೆ. ಮುಂದೆ ನವೆಂಬರ್‌ 1 ಮತ್ತು ಜನವರಿ 26ರ ಗಣರಾಜ್ಯೋತ್ಸವದಂದೂ ಧ್ವಜಾರೋಹಣ ಮಾಡುತ್ತೇವೆ’ ಎಂದು ತಿಳಿಸಿದರು.

ಗಣೇಶ ಹಬ್ಬ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೈದಾನದಲ್ಲಿ ಅವಕಾಶ ಇಲ್ಲ ಎಂದು ನಾಗರಿಕರು ಹೇಳಿದಾಗ, ‘ನೀವೆಲ್ಲ ಇಲ್ಲಿರುವ ಗೊಂದಲವನ್ನು ಅರ್ಥ ಮಾಡಿ
ಕೊಳ್ಳಬೇಕು. ಇದು ವಕ್ಫ್‌ ಬೋರ್ಡ್‌ ಮತ್ತು ಬಿಬಿಎಂಪಿ ನಡುವೆ ಮಾಲೀಕತ್ವದ ಗೊಂದಲ. ಅದನ್ನು ಹಿಂದೆ ಪರಿಹರಿಸಲು ಪ್ರಯತ್ನಪಟ್ಟೆವು. ಆದರೂ ಸಾಧ್ಯವಾಗಿಲ್ಲ’ ಎಂದು ಜಮೀರ್‌ ಉತ್ತರಿಸಿದರು.

‘ಈದ್ಗಾ ಮೈದಾನದ ಖಾತೆ ನಮ್ಮದೇ ಆಗಿದ್ದರೂ, ಮಾಲೀಕತ್ವ ಇಲ್ಲ. ವಕ್ಫ್‌ ಬೋರ್ಡ್‌ನವರು ಅರ್ಜಿ ಹಾಕಿದರೆ ಖಾತೆ ಬದಲಾಯಿಸಿಕೊಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರೇ ಹೇಳಿದ್ದಾರೆ. ಅಲ್ಲದೆ ಮೈದಾನ ಸ್ವಚ್ಛ ಮಾಡುವುದಿಲ್ಲ ಎಂದೂ ಹೇಳಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ಮುಖ್ಯ ಆಯುಕ್ತರು ಹೀಗೆ ಹೇಳಿದ್ದಾರಲ್ಲವೇ? ನಾವೇನೂ ಇಲ್ಲಿ ರಾಜಕೀಯ ಮಾಡುತ್ತಿಲ್ಲ’ ಎಂದು ಹೇಳಿದರು.

‘ಈದ್ಗಾ ಮೈದಾನ ಸಾಕಷ್ಟು ವರ್ಷ
ಗಳಿಂದ ಇದೆ. ಆಗ ಯಾರೂ ಇದನ್ನು ಕೇಳಿರಿರಲ್ಲ. ಈಗ ಮಾತ್ರ ಸೃಷ್ಟಿ ಮಾಡಿ
ದ್ದಾರೆ. ಶಾಸಕರು ಉತ್ತರಿಸಬೇಕು ಎನ್ನುತ್ತಿದ್ದಾರೆ. ಆದರೆ, ಸಂಸದರನ್ನು ಯಾಕೆ ಯಾರೂ ಕೇಳುತ್ತಿಲ್ಲ. ಅಲ್ಲದೆ ಯಾರೂ ಆಟದ ಮೈದಾನ ಇಲ್ಲವಾಗಿಸುತ್ತೇವೆ ಎಂದು ಹೇಳಿಲ್ಲ. ಆದರೂ ರಾಜಕೀಯ ಲಾಭಕ್ಕಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದರು. ‘ಆಟದ ಮೈದಾನ ಇರೊಲ್ಲ ಎಂದು ಶಾಸಕರೂ ಹೇಳಿಲ್ಲ, ಸಂಸದರೂ ಹೇಳಿಲ್ಲ. ಚಾಮರಾಜಪೇಟೆಯವರು ನನ್ನ ಬಗ್ಗೆ ಮಾತನಾಡೊಲ್ಲ. ಯಾರೋ ಬೇರೆಯವರು ಮಾಡುತ್ತಿದ್ದಾರೆ. ಈಗ ಮಾತನಾಡುತ್ತಿರುವವರು ಕೋವಿಡ್‌ ಸಮಯದಲ್ಲಿ ಎಲ್ಲಿ ಹೋಗಿದ್ದರು? 580 ಶವ ಎತ್ತಿದ್ದೇವೆ. ಯಾವ ಸಮುದಾಯ, ಜಾತಿ ಎಂದು ನೋಡಿಲ್ಲ. ಆಗ ಇವರು ಯಾರೂ ಕಾಣುತ್ತಿರಲಿಲ್ಲ’ ಎಂದರು.

‘ಯಾರಿಗಾದರೂ ಚಾಮರಾಜಪೇಟೆ ಬಂದ್‌ ಬೇಕಾ?’ ಎಂದು ಸಭೆಯಲ್ಲಿ ಇದ್ದವರಲ್ಲಿ ಜಮೀರ್‌ ಪ್ರಶ್ನಿಸಿದರು. ಕೆಲವರು ’ಬೇಡ‘ ಎಂದರು. ಇನ್ನು ಕೆಲವರು ಕೈ ಎತ್ತಿದರು. ಆಗ, ‘ಇಲ್ಲಿರುವ ಯಾರಿಗೂ ಬಂದ್‌ ಬೇಡ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಿ’ ಎಂದು ಶಾಸಕರು ಹೇಳಿದರು.

ಬಿಬಿಎಂಪಿ ಮಾಜಿ ಸದಸ್ಯರಾದ ಕೋಕಿಲ ಚಂದ್ರಶೇಖರ್‌, ಸುಜಾತ ಡಿ.ಸಿ. ರಮೇಶ್‌, ಬಿ.ಟಿ. ಶ್ರೀನಿವಾಸಮೂರ್ತಿ, ಚಂದ್ರಶೇಖರ್‌, ಅಲ್ತಾಫ್‌ ಖಾನ್‌, ಜಯ ಕರ್ನಾಟಕ ಸಂಘಟನೆಯ ವಸಂತ್‌, ಸ್ಥಳೀಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT