ಪರಪ್ಪನ ಅಗ್ರಹಾರದಲ್ಲಿದ್ದ ಕೈದಿ ಸೂಚನೆಯಂತೆ ಆಂಧ್ರದಿಂದ ಡ್ರಗ್ಸ್ ಅನ್ನು ಮೂವರು ತರುತ್ತಿದ್ದರು. ಸೂಚನೆ ನೀಡುತ್ತಿದ್ದ ಕೈದಿಯನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲಾಗಿದೆ
ಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ಈಗಲೂ ಮೊಬೈಲ್ ಬಳಕೆ
‘ಜೈಲಿನೊಳಗೆ ಕೈದಿಗಳಿಗೆ ಹೇಗೆ ಮೊಬೈಲ್ ಲಭಿಸುತ್ತಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸೆಪ್ಟೆಂಬರ್‌ನಲ್ಲಿ ಸಿಸಿಬಿ ದಾಳಿ ನಡೆಸಿದಾಗ 15 ಮೊಬೈಲ್‌ಗಳು ಪೆನ್‌ಡ್ರೈವ್ ಚಾಕು ನಗದು ಹಾಗೂ ಎಲೆಕ್ಟ್ರಿಕ್ ಸ್ಟೌ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆ ಆಗಿದ್ದವು. ಆಗ ಕಾರಾಗೃಹದ ಭದ್ರತಾ ಪಡೆ ಸಿಬ್ಬಂದಿ ವಿಚಾರಣಾಧೀನ ಕೈದಿಗಳು ಹಾಗಾ ಸಜಾ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಈಗಲೂ ಮೊಬೈಲ್‌ಗಳು ಜೈಲಿನಲ್ಲಿರುವ ಅನುಮಾನವಿದ್ದು ಮತ್ತೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.