ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಪಿಯು ತರಗತಿಗಳ ಉದ್ಘಾಟನೆ, ಕಾರ್ಯಾಗಾರ

Last Updated 10 ಜೂನ್ 2022, 19:46 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: 'ಕಾಲೇಜು ವಿದ್ಯಾರ್ಥಿಗಳು ಮನಸ್ಸು ಚಂಚಲ ಮಾಡಿಕೊಳ್ಳದೆ ಶ್ರದ್ಧಾಭಕ್ತಿಯಿಂದ ಅಂದಿನ ಪಾಠವನ್ನು ಅಂದೇ ಓದಿ ಅರ್ಥೈಸಿಕೊಳ್ಳಬೇಕು' ಎಂದು ಮನಶಾಸ್ತ್ರಜ್ಞ ಪ್ರೊ.ಅನಿಲ್ ಕುಮಾರ್ ಜೋಶಿ ತಿಳಿಸಿದರು.

ಹಾವನೂರು ಬಡಾವಣೆಯ ಅಸೆಂಟ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ತರಗತಿಗಳ ಉದ್ಘಾಟನೆ ಮತ್ತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಜಾತ್ಯತೀತ ಮನೋಭಾವವನ್ನು ಬೆಳೆಸಿಕೊಂಡು ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಅಪಾರವಾಗಿರಲಿ. ಅಬ್ದುಲ್ ಕಲಾಂ ಮತ್ತು ನೇತಾಜಿ ಅವರಂತಹ ವ್ಯಕ್ತಿತ್ವವುಳ್ಳಂತಹ ವಿದ್ಯಾರ್ಥಿಗಳು ಈ ಕಾಲೇಜಿನಿಂದ ಹೊರ ಹೊಮ್ಮಲಿ' ಎಂದು ಶುಭ ಹಾರೈಸಿದರು.‌

ಪ್ರಾಂಶುಪಾಲ ಬಿ.ಎಂ.ವೆಂಕಟೇಶ್ ಮಾತನಾಡಿ, ಕಾಲೇಜು ರೂಪುರೇಷೆಗಳ ಬಗ್ಗೆ ಹಾಗೂ ಕಾಲೇಜಿನಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಮಗ್ರ ಮಾಹಿತಿಯನ್ನು ನೀಡಿದರು.

ವಿದ್ಯಾಸಿರಿ ಟ್ರಸ್ಟ್‌ನ ನಿರ್ವಹಣ ವ್ಯವಸ್ಥಾಪಕಿ ಶ್ವೇತಾ ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT