ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನದಲ್ಲಿ ಜನಸಾಗರ

ತುಂತುರು ಮಳೆ ನಡುವೆಯೂ ಲಾಲ್‌ಬಾಗ್‌ಗೆ ಭೇಟಿ
Last Updated 11 ಆಗಸ್ಟ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’ದ ಮೂರನೇ ದಿನವಾದಭಾನುವಾರ ಲಾಲ್‌ಬಾಗ್‌ ಉದ್ಯಾನದತ್ತ ಜನಸಾಗರ ಹರಿದು ಬಂತು.

ಶುಕ್ರವಾರ ಹಾಗೂ ಶನಿವಾರಗಳಿಗೆ ಹೋಲಿಸಿದರೆ ಭಾನುವಾರ ವೀಕ್ಷಕರ ಪ್ರಮಾಣ ಹೆಚ್ಚಾಗಿದ್ದು, ಉದ್ಯಾನಕ್ಕೆ 60,500 ಮಂದಿ ಭೇಟಿ ನೀಡಿ ಹಸಿರು ಸಿರಿಯನ್ನು ಕಣ್ತುಂಬಿಕೊಂಡರು.

ತುಂತುರು ಮಳೆಯ ನಡುವೆಯೂ ಜನರು ಗಾಜಿನ ಮನೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಜಯಚಾಮರಾಜ ಒಡೆಯರ್‌ ಪ್ರತಿಮೆ ಎದುರು ನಿಂತು ಜನ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

ಗಾಜಿನ ಮನೆಯಲ್ಲಿ ಸಾಲುಗಟ್ಟಿ ನಿಂತಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿ ಹರಸಾಹಸ ಪಟ್ಟರು.ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 5ರಿಂದ 6ಗಂಟೆಯವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಜನ ಭೇಟಿ ನೀಡಿದರು. ‘ನೀರಿನ ಸಂರಕ್ಷಣೆಗಾಗಿ ಅರಣ್ಯ ಉಳಿಸಿ’ ಎಂಬ ಫಲಕ ಹಿಡಿದು ಜೈನ್‌ ಕಾಲೇಜಿನ ಯುವಕರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಬಕ್ರೀದ್‌ ಪ್ರಯುಕ್ತ ಸರ್ಕಾರಿ ರಜೆ ಇರುವ ಕಾರಣಸೋಮವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಫಲ‍ಪುಷ್ಪ ಪ್ರದರ್ಶನಕ್ಕೆ ಬರುವ ನಿರೀಕ್ಷೆ ಇದೆ.


ವಯಸ್ಕರು50,400

ಮಕ್ಕಳು10,100

ಒಟ್ಟು60,500 ಸಾವಿರ

ಸಂಗ್ರಹವಾದ ಶುಲ್ಕ₹29.86 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT