ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಐಐಎಫ್‌ಟಿಯಿಂದ ಕಾರ್ಯಾಗಾರ

Last Updated 18 ಫೆಬ್ರುವರಿ 2021, 7:58 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು (ಐಐಎಫ್‌ಟಿ) ಸ್ಪರ್ಶ ಟ್ರಸ್ಟ್‌ನ ದೀನ–ದಲಿತ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಇತ್ತೀಚೆಗೆ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಟ್ರಸ್ಟ್‌ನ ಬೋಧಕ ವರ್ಗ ಮತ್ತು ಸ್ವಯಂ ಸೇವಕರ ಸಹಾಯದದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಟ್ರಸ್ಟ್‌ನ 70 ವಿದ್ಯಾರ್ಥಿಗಳಿಗೆ ವಾಲ್ ಹ್ಯಾಂಗಿಂಗ್‍ಗಳನ್ನು ತಯಾರಿಸಲು ಸ್ಕ್ರೀನ್ ಪ್ರಿಂಟಿಂಗ್ ಮತ್ತು ಸ್ಟೆನ್ಸಿಲ್ ಪ್ರಿಂಟಿಂಗ್ ಕುರಿತು ತರಬೇತಿ ನೀಡಲಾಯಿತು. ಇದರಿಂದ ವಿದ್ಯಾರ್ಥಿಗಳು ಸ್ವ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಲಿದೆ.

ಐಐಎಫ್‌ಟಿಯ ಸಹಾಯಕ ಪ್ರಾಧ್ಯಾಪಕಿ ಶ್ರೀಲಕ್ಷ್ಮಿ ನೇತೃತ್ವದಲ್ಲಿ ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಿದರು.

ಹೊಸ ಅನ್ವೇಷಣೆಗಳ ಮೂಲಕ ಸಾಮಾಜಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಬಿ. ವೇದಗಿರಿಯವರು 2001ರಲ್ಲಿ ಈ ಐಐಎಫ್‌ಟಿ ಸ್ಥಾಪಿಸಿದ್ದರು. ಸಂಸ್ಥೆಯು ವಸ್ತ್ರವಿನ್ಯಾಸ ಮತ್ತು ಫ್ಯಾಷನ್‌ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಲ್ಲದೆ, ಅಂದಿನಿಂದಲೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT