ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಬಿಬಿಸಿ: 62 ಸಾವಿರ ಪಕ್ಷಿ ವೀಕ್ಷಣೆ

Published 4 ಮಾರ್ಚ್ 2024, 19:26 IST
Last Updated 4 ಮಾರ್ಚ್ 2024, 19:26 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಗ್ರೇಟ್‌ ಬ್ಯಾಕ್‌ಯಾರ್ಡ್‌ ಬರ್ಡ್‌ ಕೌಂಟ್‌ (ಜಿಬಿಬಿಸಿ) ಅಭಿಯಾನಕ್ಕೆ ಭಾರತದಲ್ಲಿ ಪಕ್ಷಿ ವೀಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಕಳೆದ ಬಾರಿಗೆ ಹೋಲಿಸಿದರೆ ಸುಮಾರು 7 ಸಾವಿರದಷ್ಟು ಹೆಚ್ಚು ಪಕ್ಷಿಗಳ ವೀಕ್ಷಣೆ ನಡೆದಿದೆ.

ಜಿಬಿಬಿಸಿಯು ಪಕ್ಷಿ ಸಮೀಕ್ಷೆಯಲ್ಲಿ ಸಮುದಾಯವನ್ನು ತೊಡಗಿಸಿಕೊಂಡು ನಡೆಸುವ ಅಭಿಯಾನ ಆಗಿದೆ. ಪಕ್ಷಿ ವೀಕ್ಷಕರು ಪಕ್ಷಿ ವೀಕ್ಷಣೆ ಜತೆಯಲ್ಲೇ ಅವುಗಳ ವಿವರಗಳನ್ನು ದಾಖಲಿಸಿಕೊಳ್ಳಬೇಕು.

ಈ ಬಾರಿ ದೇಶದಾದ್ಯಂತ ನಾಲ್ಕು ದಿನ (ಫೆಬ್ರುವರಿ 16 ರಿಂದ 19ರ ವರೆಗೆ) ಪಕ್ಷಿ ವೀಕ್ಷಣೆ ನಡೆಸಲಾಗಿದೆ. ಪ್ರತಿದಿನ ಸರಾಸರಿ 2 ಸಾವಿರದಿಂದ 3 ಸಾವಿರ ಮಂದಿ ಪಕ್ಷಿ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದಾರೆ. ನಾಲ್ಕು ದಿನಗಳಲ್ಲಿ ಒಟ್ಟು 62,287 ಪಕ್ಷಿಗಳ ವೀಕ್ಷಣೆ ಹಾಗೂ ಅವುಗಳ ದಾಖಲೀಕರಣ ನಡೆದಿದೆ. ಕಳೆದ ವರ್ಷ 55,000 ಪಕ್ಷಿಗಳ ವಿವರಗಳನ್ನು ದಾಖಲಿಸಲಾಗಿತ್ತು.

‘ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿಸಿಕೊಂಡು ನಡೆದ ಮೊದಲ ಸಮೀಕ್ಷೆ ಇದಾಗಿತ್ತು. ಬಹುತೇಕ ರಾಜ್ಯಗಳಲ್ಲಿ ಪಕ್ಷಿ ವೀಕ್ಷಕರು ಎಲ್ಲ ಜಿಲ್ಲೆಗಳಲ್ಲೂ ಪಕ್ಷಿ ವೀಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಬರ್ಡ್ ಕೌಂಟ್‌ ಇಂಡಿಯಾ ತಿಳಿಸಿದೆ. ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಸೇರಿವೆ. 

ಸಮೀಕ್ಷೆಯ ಅವಧಿಯಲ್ಲಿ ಅತಿಹೆಚ್ಚು ‍ಪಕ್ಷಿ ಪ್ರಭೇದಗಳನ್ನು ಪಟ್ಟಿ ಮಾಡಿರುವ ದೇಶಗಳ ಪೈಕಿ ಭಾರತವು (1,037) ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಕೊಲಂಬಿಯಾ (1,367) ಮತ್ತು ಈಕ್ವೆಡಾರ್ (1,129) ದೇಶಗಳು ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ. ಅತಿಹೆಚ್ಚು ವೀಕ್ಷಣೆ ಮತ್ತು ದಾಖಲೀಕರಣ ಅಮೆರಿಕದಲ್ಲಿ (1.72 ಲಕ್ಷ) ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT