ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 11, 12ರಂದು ಪತ್ರಿಕಾ ವಿತರಿಕರಿಗೆ ವಿಮಾ ನೋಂದಣಿ

Published 9 ಜನವರಿ 2024, 15:49 IST
Last Updated 9 ಜನವರಿ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಹಯೋಗದಲ್ಲಿ ಇದೇ 11 ಮತ್ತು 12ರಂದು ಬೆಂಗಳೂರು ನಗರ ಪತ್ರಿಕಾ ವಿತರಕರು ಮತ್ತು ಪತ್ರಿಕೆ ಹಂಚುವವರಿಗೆ ವಿಮಾ ಸೌಲಭ್ಯ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಯಶವಂತಪುರದ ಎಪಿಎಂಸಿ ಯಾರ್ಡ್‌ನ 6ನೇ ಮುಖ್ಯರಸ್ತೆಯಲ್ಲಿರುವ ಗಣೇಶ ದೇವಸ್ಥಾನ ಪಕ್ಕದ ಸಭಾಂಗಣದಲ್ಲಿ ಈ ನೋಂದಣಿ ಕಾರ್ಯಕ್ರಮವಿರುತ್ತದೆ. ದಿನಪತ್ರಿಕೆ ವಿತರಕರು ಮತ್ತು ಪತ್ರಿಕೆ ಹಂಚುವವರು ನೋಂದಣಿ ಮಾಡಿಸಿ, ‘ಇ–ಶ್ರಮ್‌’ ಕಾರ್ಡ್‌ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಕೆ. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನೋಂದಣಿ ಮಾಡಿಸುವವರು ಆಧಾರ್ ಕಾರ್ಡ್‌ ತೆಗೆದುಕೊಂಡು ಹೋಗಬೇಕು. ಮೊಬೈಲ್‌ ಸಂಖ್ಯೆಗೆ ಆಧಾರ್‌ ಲಿಂಕ್‌ ಆಗಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಪಿ.ಜಿ. ಬಾಲಾಜಿ, ಸೀನಿಯರ್ ಲೇಬರ್‌ ಇನ್‌ಸ್ಪೆಕ್ಟರ್‌– 9880217133, ಶಂಭುಲಿಂಗ ಕೆ.– 99725 34666 ಇವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT