ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಮಿನಲ್‌-2: ನಾಳೆಯಿಂದ ಅಂತರರಾಷ್ಟ್ರೀಯ ವಿಮಾನ ಹಾರಾಟ

Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ದೇವನಹಳ್ಳಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2ರಿಂದ ಅಂತರರಾಷ್ಟ್ರೀಯ ಮಾರ್ಗದ ವಿಮಾನಗಳು ಸೆ.12ರಿಂದ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿವೆ. ಆಗಮನ ಹಾಗೂ ನಿರ್ಗಮನ ಕಾರ್ಯಾಚರಣೆಯೂ ಟರ್ಮಿನಲ್‌-2ರಿಂದಲೇ ನಡೆಯಲಿದೆ.

ಇದರೊಂದಿಗೆ ಏರ್‌ ಏಷ್ಯಾ, ಏರ್‌ ಇಂಡಿಯಾ, ಸ್ಟಾರ್ ಏರ್‌ ಹಾಗೂ ವಿಸ್ತಾರ ಸಂಸ್ಥೆಗಳ ದೇಶದ ಅಂತರಿಕ ವಿಮಾನಯಾನವೂ ಇರಲಿದೆ.

ನಿಲ್ದಾಣದ ಟರ್ಮಿನಲ್ -1ರಲ್ಲಿ ಆಕಾಶ್‌ ಏರ್‌, ಅಲಾಯನ್ಸ್‌ ಏರ್‌, ಇಂಡಿಗೊ ಹಾಗೂ ಸ್ಪೈಸ್‌ ಜೆಟ್‌ ಸಂಸ್ಥೆಗಳ ವಿಮಾನಗಳಿಗೆ ಮಾತ್ರವೇ ಸೀಮಿತವಾಗಲಿದೆ. ಇದರಿಂದಾಗಿ ಪ್ರಯಾಣಿಕರ ದಟ್ಟಣೆ ಅಲ್ಪ ಪ್ರಮಾಣದಲ್ಲಿ ತಕ್ಕಲಿದೆ.

ಆಗಸ್ಟ್‌ 31ರಿಂದಲೇ ಟರ್ಮಿನಲ್‌-2ರಿಂದ ಅಂತರ ರಾಷ್ಟ್ರೀಯ ವಿಮಾನ ವಿಮಾನಯಾನ ಅಧಿಕೃತವಾಗಿ ಪ್ರಾರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಅಡತಡೆ ಹಾಗೂ ಪ್ರಯಾಣಿಕರ ಸುರಕ್ಷತ ದೃಷ್ಟಿಯಿಂದ ಕೊನೆ ಕ್ಷಣದಲ್ಲಿ ವಿಮಾನ ನಿಲ್ಧಾಣದ ನಿರ್ವಹಣ ಮಂಡಳಿಯೂ ಈ ಯೋಜನೆ ಮುಂದೂಡಿತ್ತು.

₹5ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್‌-2 ಅನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವಂಬರ್‌ನಲ್ಲಿ ಉದ್ಘಾಟಿಸಿದ್ದರು. ಈ ಟರ್ಮಿನಲ್‌ ಒಟ್ಟು 255661 ಚದರ ಅಡಿಯಷ್ಟು ಸ್ಥಳಾವಕಾಶ ಹೊಂದಿದೆ. ಉದ್ಯಾನದಿಂದ ಕೂಡಿದ ಟರ್ಮಿನಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಖಾಸಗಿ ಟ್ಯಾಕ್ಸಿ ಬಂದ್‌: ಹೆಚ್ಚುವರಿ ಬಸ್‌

ಖಾಸಗಿ ಟ್ಯಾಕ್ಸಿ ಚಾಲಕರ ಸಂಘ ಸೋಮವಾರ ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಮಾಡುವುದು ಬಹುತೇಕ ಸಂಶಯವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿತ್ಯ 500 ಟ್ರಪ್ ಮಾಡುತ್ತಿದ್ದ ವಾಯು ವಜ್ರ ಸೇವೆಸೋಮವಾರದಂದು ಹೆಚ್ಚುವರಿಯಾಗಿ 100 ಟ್ರಿಪ್‌ ಮಾಡಲು ಬಿಎಂಟಿಸಿ ಸಜ್ಜಾಗಿದೆ. ಇದರಿಂದಾಗಿ ವಿಮಾನ ನಿಲ್ಧಾಣಕ್ಕೆ ತೆರಳುವ ಹಾಗೂ ನಿಲ್ದಾಣದಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಜನರಿಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT