ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದವರನ್ನು ಈ ದತ್ತಿ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಧಾರವಾಡ ಜಿಲ್ಲೆಯ ಕುಂದಗೋಳ ಸಮೀಪದ ಶಿರೂರು ಗ್ರಾಮದವರಾದ ಬಸವರಾಜ ಬೆಂಗೇರಿ, ‘ಶಿರಹಟ್ಟಿ ಫಕೀರೇಶ್ವರ ಮಹಾತ್ಮೆ’ ನಾಟಕದ ಫಕೀರೇಶ್ವರನ ಪಾತ್ರಕ್ಕೆ ಹೆಸರಾದವರು. ಈ ನಾಟಕವು ಈವರೆಗೆ 1,400ಕ್ಕೂ ಹೆಚ್ಚು ಪ್ರದರ್ಶನವನ್ನು ಕಂಡು ದಾಖಲೆ ನಿರ್ಮಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.