ಈ ವೆಬ್ ಪೋರ್ಟಲ್ ವ್ಯಾಟಿಕನ್ ಸಿಟಿಯಲ್ಲಿ ಕೇಂದ್ರ ಕಚೇರಿ ಹೊಂದಿದೆ. ಕ್ರೈಸ್ತರ ಧರ್ಮ ಗುರು ಪೋಪ್ ಪ್ರಾನ್ಸಿಸ್ ಅವರ ಕಾರ್ಯಚಟುವಟಿಕೆ ಹಾಗೂ ಸಂದೇಶಗಳು, ಕ್ಯಾಥೋಲಿಕ್ ಚರ್ಚ್ ಕಾರ್ಯಕ್ರಮಗಳು ಹಾಗೂ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಈ ವೆಬ್‌ಸೈಟ್ ಪ್ರಕಟಿಸಲಿದೆ. ವಿಶ್ವದ ವಿವಿಧ ಭಾಷೆಗಳಲ್ಲಿ ಈ ವೆಬ್‌ಸೈಟ್ ಮೂಲಕ ಮಾಹಿತಿ ಒದಗಿಸಲಾಗುತ್ತಿದೆ. ಭಾರತೀಯ ಭಾಷೆಗಳಾದ ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಈಗ ಆ ಸಾಲಿಗೆ ಕನ್ನಡ ಸೇರಿದೆ.