ಬುಧವಾರ, ಮಾರ್ಚ್ 29, 2023
33 °C
High court

ನಕ್ಷೆ ಇಲ್ಲದೆ ನೋಂದಣಿ ಪ್ರಕ್ರಿಯೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಕ್ಷೆ ಪಡೆದುಕೊಳ್ಳದೆ ನೋಂದಣಿ ಪ್ರಕ್ರಿಯೆಗೆ ಮುಂದುವರಿಸಲು ಅವಕಾಶ ಆಗುವಂತೆ ಕಾವೇರಿ ವೆಬ್‌ಸೈಟ್ ಬದಲಾವಣೆಯನ್ನು ತ್ವರಿತವಾಗಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

11ಇ ನಕ್ಷೆ ಕಡ್ಡಾಯಗೊಳಿಸುವಂತಿಲ್ಲ ಎಂದು ಜಿ.ರಾಮಾಚಾರ್ ಮತ್ತು ಸರ್ಕಾರದ ನಡುವಿನ ಪ್ರಕರಣದಲ್ಲಿ 2016ರಲ್ಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ನಕ್ಷೆ ಕಡ್ಡಾಯದ ಬಗ್ಗೆ 2009ರ ಸುತ್ತೋಲೆ ಮತ್ತು ನೋಂದಣಿ ಕಾಯ್ದೆ 1908ರ ಸೆಕ್ಷನ್ 22ಎಗೆ ತಿದ್ದುಪಡಿಯನ್ನೂ ರದ್ದುಗೊಳಿಸಿದೆ.

ಇದನ್ನು ಪುನರುಚ್ಛರಿಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ, ‘2010ರಲ್ಲಿ ಮಾಡಿಕೊಂಡಿರುವ ನೋಂದಾಯಿತ ಕ್ರಯ ಪತ್ರವನ್ನು 11ಇ ನಕ್ಷೆ ಕೇಳದೆ ಒಂದು ತಿಂಗಳಲ್ಲಿ ನೋಂದಣಿ ಪೂರ್ಣಗೊಳಿಸಿ ಅರ್ಜಿದಾರರಿಗೆ ಹಸ್ತಾಂತರಿಸಬೇಕು’ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪ ನೋಂದಣಾಧಿಕಾರಿಗೆ ನಿರ್ದೇಶನ ನೀಡಿತು.

ಅರ್ಜಿದಾರರು ಕೃಷಿ ಜಮೀನು ಖರೀದಿಸಿದ್ದರು. ನಕ್ಷೆ ಇಲ್ಲ ಎಂಬ ಕಾರಣಕ್ಕೆ ನೋಂದಣಿ ಕ್ರಯ ಪತ್ರ ಹಸ್ತಾಂತರಕ್ಕೆ 2010ರ ಡಿಸೆಂಬರ್‌ 18ರಂದು ಉಪ ನೋಂದಣಾಧಿಕಾರಿ ನಿರಾಕರಿಸಿದ್ದರು. 2021ರ ಸೆ.21ರಂದು ಹಿಂಬರಹವನ್ನೂ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.