ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳಿಗೆ ಮೊಕದ್ದಮೆಗಳೇ ಅರ್ಹತೆ

ಬೆಳ್ಳಿ ಸಿನಿಮಾ– ಬೆಳ್ಳಿ ಮಾತು ಕಾರ್ಯಕ್ರಮದಲ್ಲಿ ನಟ ಅನಂತ್‌ ನಾಗ್‌
Last Updated 6 ಮೇ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾರಣಕ್ಕೆ ಬರುವವರ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳು ಇರಬೇಕೆಂಬುದೇ ಇಂದಿನ ಅರ್ಹತೆಯಾಗಿದೆ’ ಎಂದು ನಟ ಅನಂತ್‌ ನಾಗ್‌ ಸೋಮವಾರ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ‘ಬೆಳ್ಳಿ ಸಿನಿಮಾ– ಬೆಳ್ಳಿ ಮಾತು’ ಕಾರ್ಯಕ್ರಮದಲ್ಲಿ ‘ಕವಲುದಾರಿ’ ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ಮಾತನಾಡಿದರು.

‘ದೇಶ ಮುನ್ನಡೆಸುವ, ಶಾಸನಗಳನ್ನು ರೂಪಿಸುವ ಶೇ 33ರಷ್ಟು ಸಂಸದರು ಹಾಗೂ ಶಾಸಕರು ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತವೆ. ರಾಜಕಾರಣಿಗಳ ಅಪರಾಧಗಳ ಕುರಿತು ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಬಿ.ಆರ್‌.ಅಂಬೇಡ್ಕರ್‌ ಅವರು ಸ್ವಾತಂತ್ರ್ಯದ ನಂತರ ಗಟ್ಟಿಯಾಗಿ ಮಾತನಾಡಿದರು. ಅಂದಿನಿಂದಲೂ ಪರಿಸ್ಥಿತಿ ಬಿಗಡಾಯಿಸುತ್ತಲೇ ಬಂದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ರಾಜಕಾರಣಿಗಳು ಅಪರಾಧಗಳಲ್ಲಿ ಭಾಗಿಯಾಗುವುದು 1970ರ ದಶಕದ ನಂತರ ಹೆಚ್ಚಾಯಿತು. ಇದರಿಂದ ಭ್ರಷ್ಟಾಚಾರವೂ ಬೆಳೆಯಿತು. ಇಂತಹ ಕಥಾವಸ್ತುವನ್ನು ಆಧರಿಸಿ ‘ಕವಲುದಾರಿ’ ಸಿನಿಮಾ ತಯಾರಾಗಿದೆ. ಇದರಲ್ಲಿನ ಮೇಲ್ನೋಟದ ಕಥಾನಕಕ್ಕಿಂತ ಒಳನೋಟದ ಚಿತ್ರಣ ಚನ್ನಾಗಿದೆ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌, ‘ಮನರಂಜನೆ, ಕಲಾತ್ಮಕ ಸಿನಿಮಾಗಳೆಂದು ವಿಭಾಗಿಸದೆ ಒಳ್ಳೆಯ ಸಿನಿಮಾಗಳನ್ನು ಆಯ್ದು ಪ್ರದರ್ಶಿಸುವ ಮೂಲಕ ಸಿನಿಮಾಸಕ್ತಿ ಮೂಡಿಸುವ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ. ಹೊಲದಲ್ಲಿ ಕಳೆ ಬೆಳೆಯುವಂತೆ ತಯಾರಾಗುವ ಸಿನಿಮಾಗಳ ಮಧ್ಯೆ ಉತ್ತಮ ಬೆಳೆಯಂತಹ ಸಿನಿಮಾಗಳನ್ನು ಗುರುತಿಸುವುದು ಸಹ ಇಂದು ಕಷ್ಟದ ಕೆಲಸ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT