ಬೆಂಗಳೂರು: ಕೆ.ಆರ್.ಪುರ ಪ್ರದೇಶದಲ್ಲಿ ಅನಧಿಕೃತವಾಗಿ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ರಾತ್ರಿ ವೇಳೆ ಹಾಕಲಾಗುತ್ತಿದೆ. ರಸ್ತೆಗಳನ್ನು ಮರು ನಿರ್ಮಿಸದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.

ವಿಜಿನಾಪುರ ವಾರ್ಡಿನ ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ ಪಾಲಿಕೆಯ ಅನುಮತಿಯಿಲ್ಲದೆ ಖಾಸಗಿ ಟೆಲಿಕಾಂ ಸಂಸ್ಥೆ ಅಂತರ್ಜಾಲ ಸೇವೆ ಒದಗಿಸಲು ಕೇಬಲ್ ಅಳವಡಿಸುತ್ತಿದೆ. ಈ ಮಾಹಿತಿ ತಿಳಿದು ಪಾಲಿಕೆ ಸದಸ್ಯ ಬಂಡೆ ಎಸ್.ರಾಜು ಅವರು ಕಾಮಗಾರಿ ನಡೆಸುವ ಯಂತ್ರಗಳನ್ನು ವಶಕ್ಕೆ ಪಡೆದು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ, ಪ್ರಕರಣ ದಾಖಲಾಗಿಲ್ಲ.

‘ಗುಂಡಿ ಮುಚ್ಚುವಂತೆ ಹೈಕೋರ್ಟ್ ಆದೇಶಿಸಿದೆ. ಆದರೆ, ನಮ್ಮ ಕ್ಷೇತ್ರದಲ್ಲಿ ಅನಧಿಕೃತವಾಗಿ ಒಎಫ್‌ಸಿ ಅಳವಡಿಕೆ ದೊಡ್ಡ ಮಾಫಿಯಾವಾಗಿಬಿಟ್ಟಿದೆ. ಈ ಬಗ್ಗೆ ಪ್ರಶ್ನಿಸಲು ಅಧಿಕಾರಿಗಳು ಧೈರ್ಯ ತೋರುತ್ತಿಲ್ಲ’ ಎಂದು ರಾಜು ದೂರಿದರು.

ಕೇಬಲ್ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ದೂರು ದಾಖಲಿಸಲಾಗಿದೆ. ಸಂಬಂಧಪಟ್ಟವರು ಸರಿಯಾದ ದಾಖಲೆ ಕೊಡದಿದ್ದರೆ ಅವರ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ವಿಜಿನಾಪುರ ವಾರ್ಡ್‌ನ ಸಹಾಯಕ ಎಂಜಿನಿಯರ್ ಕೇಶವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.