ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ತೆಂಗಿನ ಗರಿ, ಬಾಳೆ ದಿಂಡಿನಲ್ಲಿ ಅರಳಿದ ರಾಮಮಂದಿರ

Published 21 ಜನವರಿ 2024, 8:41 IST
Last Updated 21 ಜನವರಿ 2024, 8:41 IST
ಅಕ್ಷರ ಗಾತ್ರ

ಬೆಂಗಳೂರು: ಜಾನೂರು ಕಲೆಯಲ್ಲಿ ತೆಂಗಿನ ಗರಿ ಹಾಗೂ ಬಾಳೆ ದಿಂಡಿನಲ್ಲಿ ಅರಳಿದ ರಾಮಮಂದಿರ, ರಾಮನ ಪ್ರತಿಕೃತಿ, ಕಪ್ಪು ಸುಂದರಿಗೆ ತೊಡಿಸಿದ್ದ ತೆಂಗಿನ ಉಡುಗೆ, ತರಕಾರಿಗಳಿಂದ ಮಾಡಿದ ವಿಶೇಷ ಕೆತ್ತನೆ ನೋಡುಗರ ಮನಸೂರೆಗೊಂಡವು.

ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ಆಯೋಜಿಸಿರುವ ವಿಶೇಷ ಪ್ರದರ್ಶನದಲ್ಲಿ‌, ಇಕೆಬಾನ ಹೂಗಳ ಪ್ರದರ್ಶನವೂ ಚಿತ್ತಾಕರ್ಷಕವಾಗಿತ್ತು. ಇವುಗಳೊಂದಿಗೆ ಫೋಟೊ ತೆಗೆಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದರು.

ವೈವಿಧ್ಯಮಯ ಹೂಗಳಿಂದ ಬಿಡಿಸಿದ ಭಾರತದ ಭೂಪಟ, ಟೊಮೆಟೊ, ಕುಂಬಳಕಾಯಿ ಸೇರಿದಂತೆ ವಿವಿಧ ತರಕಾರಿಗಳಲ್ಲಿ ವಿಶೇಷ ಕೆತ್ತನೆ ನೋಡಗರನ್ನು ಸೆಳೆಯಿತು.

ಐದು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಜಾನೂರು ಕಲೆಯಲ್ಲಿ 26, ಹೂವಿನ ರಂಗೋಲಿ ಸ್ಪರ್ಧೆಯಲ್ಲಿ 15, ಇಕೆಬಾನದಲ್ಲಿ 12 ಥಾಯ್‌ ಆರ್ಟ್‌ನಲ್ಲಿ 16 ಮತ್ತು ತರಕಾರಿ ಕೆತ್ತನೆ ಸ್ಪರ್ಧೆಯಲ್ಲಿ 23 ಮಹಿಳೆಯರು ಭಾಗವಹಿಸಿದ್ದರು.

ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ನಟಿ ತಾರಾ ಅನುರಾಧಾ, ‘ತೆಂಗಿನ ಗರಿ, ತರಕಾರಿ ಹಾಗೂ ಪುಷ್ಪಗಳನ್ನು ಬಳಸಿಕೊಂಡು ಸುಂದರವಾದ ಕಲಾಕೃತಿಗಳನ್ನು ರಚಿಸಿರುವ ಎಲ್ಲರೂ ಅಭಿನಂದನಾರ್ಹರು. ಬಸವಣ್ಣ ಹಾಗೂ ವಚನ ಸಾಹಿತ್ಯ ಆಧಾರಿತ ಫಲಪುಷ್ಪ ಪ್ರದರ್ಶನ ಆಯೋಜಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಾಗಿದೆ’ ಎಂದು ತಿಳಿಸಿದರು.

‘ಇದೇ 22ರಂದು (ಸೋಮವಾರ) ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗಲಿದ್ದು, ಭಾರತೀಯರ ಕನಸು ನನಸಾಗಲಿದೆ. ಸಾವಿರಾರೂ ಹಿರಿಯರ ಶ್ರಮ ಹಾಗೂ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಅದಕ್ಕೆ ಪೂರಕವಾಗಿ ಜಾನೂರು ಕಲೆಯಲ್ಲಿ ರಾಮನಿಗೆ ಸಂಬಂಧಿಸಿದ ಕಲಾಕೃತಿಗಳನ್ನು ರಚಿಸಿರುವುದು ಶ್ಲಾಘನೀಯ’ ಎಂದರು.

ಫಲಪುಷ್ಪ ಪ್ರದರ್ಶನಕ್ಕೆ ಪ್ರೇಕ್ಷಕರ ದಂಡು

ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ 29100 ಮಂದಿ ಶನಿವಾರ ಭೇಟಿ ನೀಡಿದ್ದರು. ₹18 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿತ್ತು. ಲಾಲ್‌ಬಾಗ್‌ನ ನಾಲ್ಕು ಗೇಟ್‌ಗಳಲ್ಲಿ ಜನಸಂದಣಿ ಹೆಚ್ಚಿತ್ತು. ಗಾಜಿನ ಮನೆಯಲ್ಲಿ ಪುಷ್ಪಗಳಲ್ಲಿ ಅರಳಿದ ಅನುಭವ ಮಂಟಪವನ್ನು ನೋಡಲು ಬಂದಿದ್ದ ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಪೊಲೀಸರು ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಕಿಕ್ಕಿರಿದು ಸೇರಿದ್ದ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ತೋಟಗಾರಿಕೆ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಶನಿವಾರ ಪಾಲ್ಗೊಂಡಿದ್ದ ಜನಸ್ತೋಮ. –ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ತೋಟಗಾರಿಕೆ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಶನಿವಾರ ಪಾಲ್ಗೊಂಡಿದ್ದ ಜನಸ್ತೋಮ. –ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಜಾನೂರ್‌ ಕಲೆಯ ಮೂಲಕ ಕಪ್ಪು ಸುಂದರಿ ಪ್ರತಿಮೆಗೆ ಎಳೆ ತೆಂಗಿನ ಗರಿಗಳಿಂದ ತೊಡಿಸಿದ್ದ ಉಡುಗೆಯನ್ನು ತಾರಾ ಅನುರಾಧಾ ವೀಕ್ಷಿಸಿದರು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಲಾಲ್‌ಬಾಗ್‌ ಉಪನಿರ್ದೇಶಕಿ ಜಿ. ಕುಸುಮಾ ಇದ್ದಾರೆ –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಜಾನೂರ್‌ ಕಲೆಯ ಮೂಲಕ ಕಪ್ಪು ಸುಂದರಿ ಪ್ರತಿಮೆಗೆ ಎಳೆ ತೆಂಗಿನ ಗರಿಗಳಿಂದ ತೊಡಿಸಿದ್ದ ಉಡುಗೆಯನ್ನು ತಾರಾ ಅನುರಾಧಾ ವೀಕ್ಷಿಸಿದರು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಲಾಲ್‌ಬಾಗ್‌ ಉಪನಿರ್ದೇಶಕಿ ಜಿ. ಕುಸುಮಾ ಇದ್ದಾರೆ –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT