ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಲುಗಾರನ ನೆರವಿನಿಂದ ಲ್ಯಾಪ್‌ಟಾಪ್‌ ಕಳವು

Last Updated 19 ಮಾರ್ಚ್ 2021, 17:59 IST
ಅಕ್ಷರ ಗಾತ್ರ

ಬೆಂಗಳೂರು: ಕಾವಲುಗಾರರಿಗೆಹಣದ ಆಸೆ ತೋರಿಸಿ, ಖಾಸಗಿ ಕಂಪನಿಯೊಂದರಲ್ಲಿ ಲ್ಯಾಪ್‌ಟಾಪ್‌ ಕದಿಯಲು ಒಪ್ಪಂದ ಮಾಡಿಕೊಂಡು 38 ಲ್ಯಾಪ್‌ಟಾಪ್‌ಗಳನ್ನು ತರಿಸಿಕೊಂಡಿದ್ದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

‘ಬಾಪೂಜಿನಗರದಲ್ಲಿ ವಾಸವಿರುವ ಖಾಸಗಿ ಕಂಪನಿ ಉದ್ಯೋಗಿ ಮುಬಾರಕ್‌ (26) ಬಂಧಿತ ಆರೋಪಿ. ಲ್ಯಾಪ್‌ಟಾಪ್‌ ಕದ್ದು ತಂದಿದ್ದ ಕಾವಲುಗಾರ ಹೃಷಿಕೇಶ್ ಸಾಹು (27) ಸದ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಪ್ರಿಂಟರ್ ಮತ್ತು ಸ್ಕ್ಯಾನರ್‌ ರಿಪೇರಿಗಾಗಿಮುಬಾರಕ್‌ ಕಾವಲುಗಾರ ಕೆಲಸ ಮಾಡಿಕೊಂಡಿದ್ದ ಮತ್ತೊಂದು ಕಂಪನಿಗೆ ಬರುತ್ತಿದ್ದ. ಈ ವೇಳೆಹೃಷಿಕೇಶ್ ಸಾಹುನನ್ನು ಪರಿಚಯಿಸಿಕೊಂಡು, ತಮ್ಮ ಕಂಪನಿಯಿಂದ ಲ್ಯಾಪ್‌ಟಾಪ್‌ ಕಳವು ಮಾಡಿ ನೀಡುವಂತೆ ಹೇಳಿದ್ದ. ಹಣದ ಆಸೆಗಾಗಿಹೃಷಿಕೇಶ್ ಹಲವಾರು ಲ್ಯಾಪ್‌ಟಾಪ್‌ಗಳನ್ನು ಕದ್ದುಮುಬಾರಕ್‌ಗೆ ನೀಡಿದ್ದ. ಕದ್ದ ಲ್ಯಾಪ್‌ಟಾಪ್‌ ಒಂದಕ್ಕೆ ಎರಡು ಅಥವಾ ಮೂರು ಸಾವಿರ ಹಣ ನೀಡಿ ಖರೀದಿಸುತ್ತಿದ್ದ’ ಎಂದು ಮಾಹಿತಿ ನೀಡಿದರು.

‘ಆರೋಪಿಮುಬಾರಕ್‌ನನ್ನು ದಸ್ತಗಿರಿ ಮಾಡಿ, ₹20 ಲಕ್ಷ ಬೆಲೆಬಾಳುವ 38 ಕದ್ದ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಚಿಕಿತ್ಸೆಯಲ್ಲಿರುವ ಈ ಪ್ರಕರಣದ ಪ್ರಮುಖ ಆರೋಪಿಹೃಷಿಕೇಶ್‌ನನ್ನು ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT