ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತಾಗಾರಗಳ ಬಳಿಯೂ ಸಾಲು

Last Updated 18 ಜುಲೈ 2020, 21:18 IST
ಅಕ್ಷರ ಗಾತ್ರ

ಬೆಂಗಳೂರು: ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಜಾಗ ಸಿಗದೆ ಸಮಸ್ಯೆ ಎದುರಿಸುವ ಸ್ಥಿತಿ ಒಂದೆಡೆಯಾದರೆ, ಮೃತರ ಅಂತ್ಯ ಕ್ರಿಯೆಗೆ ಚಿತಾಗಾರಗಳಲ್ಲೂ ಜಾಗ ಸಿಗುವುದು ಕಷ್ಟವಾಗಿದೆ.

ಸೋಂಕಿತರು ಮತ್ತು ಸೋಂಕು ಇಲ್ಲದವರು ಸೇರಿ ದಿನಕ್ಕೆ 65ರಿಂದ 70 ಮಂದಿ ಮೃತಪಡುತ್ತಿದ್ದಾರೆ. ಅಂತ್ಯಕ್ರಿಯೆಗೆವಿದ್ಯುತ್ ಚಿತಾಗಾರಗಳಲ್ಲೂ ದಟ್ಟಣೆ ಹೆಚ್ಚುತ್ತಿದೆ.

ಕೊರೊನಾ ಸೋಂಕಿತರ ಮೃತದೇಹ ಹಾಗೂ ಬೇರೆ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಒಬ್ಬ ಸೋಂಕಿತನ ಮೃತದೇಹವನ್ನು ಸುಡಲು ಕನಿಷ್ಠ ಒಂದು ಗಂಟೆ ಸಮಯ ಬೇಕಾಗಲಿದೆ.

ಬನಶಂಕರಿ, ಸುಮನಹಳ್ಳಿ, ವಿಲ್ಸನ್ ಗಾರ್ಡನ್, ಹೆಬ್ಬಾಳ, ಶ್ರೀರಾಮಪುರ ಚಿತಾಗಾರಗಳ ಮುಂದೆ ಶವ ಹೊತ್ತ ಆಂಬುಲೆನ್ಸ್‌ಗಳು ಕಾಯುವ ಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT