ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆ ಸೇರಿದ್ದ ಅಯಸ್ಕಾಂತ ಹೊರಕ್ಕೆ: ಬಾಲಕ ಬಚಾವ್‌!

Last Updated 26 ಡಿಸೆಂಬರ್ 2019, 13:11 IST
ಅಕ್ಷರ ಗಾತ್ರ

ಬೆಂಗಳೂರು:ಆಟ ಆಡುವಾಗ ಆಕಸ್ಮಿಕವಾಗಿ ಎಂಟು ಬಾಲಕನ ಹೊಟ್ಟೆ ಸೇರಿದ್ದ ಎರಡು ಆಟಿಕೆಯ ಆಯಸ್ಕಾಂತಗಳನ್ನು (ಮ್ಯಾಗ್ನೆಟಿಕ್‌ಬಿಲ್ಡಿಂಗ್ ಬ್ಲಾಕ್‌) ಮಾರತ್ತಹಳ್ಳಿಯ ರೈನ್‌ಬೋ ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಹೊಟ್ಟೆ ನೋವು ಮತ್ತು ವಾಂತಿ ಅನುಭವ ತೀವ್ರವಾದಾಗ ಬಾಲಕ ನಡೆದ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾನೆ. ಪಾಲಕರು ಆತನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಮಕ್ಕಳ ವೈದ್ಯ ಡಾ. ಅರುಣ್ ಗಾರ್ಗ್‌ ಎಂಡೋಸ್ಕೋಪಿ ಮೂಲಕ ಯಶಸ್ವಿಯಾಗಿ ಆಯಸ್ಕಾಂತಗಳನ್ನು ಹೊರ ತೆಗೆದಿದ್ದಾರೆ.ಬಾಲಕ ಈಗ ಆರೋಗ್ಯವಾಗಿದ್ದಾನೆ.

ಸವಾಲಿನ ಎಂಡೋಸ್ಕೋಪಿ

ಇದು ಮಾಮೂಲಿ ಎಂಡೋಸ್ಕೋಪಿ ಆಗಿರಲಿಲ್ಲ. ಅಯಸ್ಕಾಂತಗಳೆರಡೂ ಹೊಟ್ಟೆಯಲ್ಲಿ ಅಂಟಿಕೊಂಡೇ ಇರುವುದು ಸ್ಕ್ಯಾನಿಂಗ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಇದನ್ನು ಹೊರತೆಗೆಯಲು ವೈದ್ಯರು ತಾಸುಗಟ್ಟಲೇ ಹೆಣಗಾಡಬೇಕಾಯಿತು.


‘ಎರಡು ತಾಸು ಹೊಟ್ಟೆಯಲ್ಲಿಯೇ ಅಯಸ್ಕಾಂತಗಳು ಇದ್ದಿದ್ದರೆ ಕರುಳಿನಲ್ಲಿ ಸೇರಿಕೊಂಡು ಅಪಾಯ ಎದುರಾಗುತ್ತಿತ್ತು. ಅಷ್ಟರಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿದ್ದರಿಂದ ಬಾಲಕ ಬದುಕುಳಿದಿದ್ದಾನೆ. ಅಯಸ್ಕಾಂತಗಳೆರಡೂ 4ಸೆಂ.ಮೀ ಉದ್ದ ಇದ್ದವು. ಕರುಳಿಗೆ ಹೋಗಿ ಸೇರಿಕೊಳ್ಳದಿರುವುದೇ ಆಶ್ಚರ್ಯ.ಅಂಟಿಕೊಂಡಿದ್ದ ಪ್ರಬಲ ಅಯಸ್ಕಾಂತಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಎಂಡೋಸ್ಕೋಪಿ ನೆರವಿನಿಂದ ಹೊರ ತೆಗೆದಿದ್ದೇ ಒಂದು ಸಾಹಸ' ಎಂದು ಡಾ. ಗಾರ್ಗ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT