ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದೇವರ ಬೆಟ್ಟದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜೆ

Published 15 ಜನವರಿ 2024, 16:00 IST
Last Updated 15 ಜನವರಿ 2024, 16:00 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಸೋಂಪುರ ಹೋಬಳಿಯ ಶ್ರೀರಾಮದೇವರ ಬೆಟ್ಟದಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಿಗ್ಗೆ ಮಕರ ಸಂಕ್ರಾಂತಿಯ ಅಂಗವಾಗಿ ಪೂಜಾ ಕಾರ್ಯಕ್ರಮಗಳು ನಡೆದವು.

ಭಾನುವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜಾ ತಿರ್ಥ ಸಂಗ್ರಹ, ಸ್ವಸ್ತಿವಾಚನ, ದೀಪಾರಾಧನೆ, ರಕ್ಷಾಬಂಧನ, ಕಳಶಾರಾಧನೆ, ಇತರ ಪೂಜಾ ಕೈಂಕರ್ಯಗಳು ನಡೆದವು.

ಸೋಮವಾರ ಬೆಳಿಗ್ಗೆ ಶ್ರೀರಾಮದೇವರಿಗೆ ವೇದಪಾರಾಯಣ, ಪುಣ್ಯಾಹ, ಫಲಾಪಂಚಾಮೃತ ಅಭಿಷೇಕ ನಂತರ ಅಗ್ನಿಪ್ರತಿಷ್ಠೆ, ಶ್ರೀರಾಮ ತಾರಕ ಹೋಮ, ಮೂರ್ತಿ ಹೋಮ, ಮಹಾ ಪೂರ್ಣಾಹುತಿ ದಿಕ್ಪಾಲಕರ ಬಲಿಪ್ರದಾನ, ಕುಂಭಾಬಿಷೇಕ ಮತ್ತು ಪ್ರಾಕಾರೋತ್ಸವ ಶೋಢಷೋಪಚಾರ, ಅಷ್ಟಾವಾದಾನ ಸೇವೆ ಮಹಾ ಮಂಗಳಾರತಿ ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸುತ್ತಮುತ್ತಲ ಗ್ರಾಮಸ್ಥರು, ದೇವರ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT