ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರದ್ದೋ ಹೆಸರಿನಲ್ಲಿ ಜಾಮೀನು ನೀಡಿ ವಂಚನೆ: ಎಫ್‌ಐಆರ್

Last Updated 2 ಡಿಸೆಂಬರ್ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಪ್ರಕರಣವೊಂದರ ಆರೋಪಿಗೆ ಯಾರದ್ದೂ ಹೆಸರಿನಲ್ಲಿ ಜಾಮೀನು ನೀಡಿ ವಂಚಿಸಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆರೋಪಿ ಸಿಲಿಂಬರಸ್ ಎಂಬಾತನಿಗೆ ಎಸ್‌. ಬಸವಕುಮಾರ್ ಹೆಸರಿನ ದಾಖಲೆಗಳನ್ನು ನೀಡಿ ಜಾಮೀನು ಕೊಡಿಸಿ ವಂಚಿಸಿರುವ ಬಗ್ಗೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಎಂ. ರಾಮಚಂದ್ರ ದೂರು ನೀಡಿದ್ದಾರೆ. ನಕಲಿ ಜಾಮೀನುದಾರನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆತನ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಾವರೆಕೆರೆ ಹೋಬಳಿಯ ಗಂಗೇನಹಳ್ಳಿಯ ಎಸ್.ಬಸವಕುಮಾರ್ ಅವರ ಹೆಸರಿನಲ್ಲಿ ಆಧಾರ್, ಪಹಣಿ ಹಾಗೂ ಮ್ಯುಟೇಷನ್ ನೋಂದಣಿ ಪ್ರತಿಯನ್ನು ನಕಲಿಯಾಗಿ ಸೃಷ್ಟಿಸಲಾಗಿತ್ತು. ಬಸವಕುಮಾರ್ ಪರವಾಗಿ ಅಪರಿಚಿತ ಜಾಮೀನುದಾರನಾಗಿದ್ದ. ಆತನ ಮೂಲಕವೇ ಆರೋಪಿಗೆ ಜಾಮೀನು ಮಂಜೂರಾಗಿತ್ತು’ ಎಂದು ತಿಳಿಸಿದರು.

‘ಜಾಮೀನು ಪಡೆದಿದ್ದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಗೈರಾಗುತ್ತಿದ್ದ. ನೋಟಿಸ್ ನೀಡಿದರೂ ವಿಚಾರಣೆಗೆ ಬಂದಿರಲಿಲ್ಲ. ಅವಾಗಲೇ ಜಾಮೀನುದಾರ ಬಸವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ಬಸವಕುಮಾರ್, ‘ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರಿನಲ್ಲಿ ದಾಖಲೆ ನೀಡಿ ಆರೋಪಿಗೆ ಜಾಮೀನು ಕೊಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು. ಅವರ ಮನವಿ ಪರಿಷ್ಕರಿಸಿದ ನ್ಯಾಯಾಲಯ, ನಕಲಿ ದಾಖಲೆ ಸೃಷ್ಟಿಸಿ ಜಾಮೀನು ಕೊಡಿಸಿರುವ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT