ಶನಿವಾರ, ಡಿಸೆಂಬರ್ 7, 2019
24 °C

‘ಮಸಾಜ್ ಗರ್ಲ್’ ನಂಬಿ ಹಣ ಕಳೆದುಕೊಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವತಿಯಿಂದ ಮಸಾಜ್ ಮಾಡಿಸುವುದಾಗಿ ಹೇಳಿ ನಂಬಿಸಿದ್ದ ವಂಚಕನೊಬ್ಬ ನಗರದ ನಿವಾಸಿ ಅನಿಮೇಶ್ ಎಂಬುವರಿಂದ ₹10,000 ಪಡೆದು ವಂಚಿಸಿದ್ದು, ಆ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆನ್ನುನೋವು ನಿವಾರಣೆಗೆ ಮಸಾಜ್ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಅನಿಮೇಶ್, ಸ್ನೇಹಿತರೊಬ್ಬರು ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದರು. ಆರೋಪಿ ರವಿ ಎಂಬಾತ, ‘ಯುವತಿಯೇ ಹೋಟೆಲ್‌ಗೆ ಬಂದು ಮಸಾಜ್ ಮಾಡು ತ್ತಾಳೆ. ಮುಂಗಡ ಹಣ ನೀಡಬೇಕು’ ಎಂದಿದ್ದ. ಅದನ್ನು ನಂಬಿ ಅನಿಮೇಶ್ ಹಣ ಪಾವತಿಸಿದ್ದ. ನಂತರ ಆರೋಪಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು