ಕನ್ನಡ ಮರೆಯದಿರಿ, ಸ್ವಚ್ಛತೆ ಕಾಪಾಡಿ...

7
ಪ್ರಥಮ ಪ್ರಜೆಗೆ ಮಾಜಿ ಮೇಯರ್‌ಗಳ ಕಿವಿಮಾತು

ಕನ್ನಡ ಮರೆಯದಿರಿ, ಸ್ವಚ್ಛತೆ ಕಾಪಾಡಿ...

Published:
Updated:

ಬೆಂಗಳೂರು: ನಾಡಿನ ರಾಜಧಾನಿಯಾಗಿರುವ ಬೆಂಗಳೂರಿನಲ್ಲೇ ಕನ್ನಡದ ಅಸ್ಮಿತೆ ಮರೆಯಾಗುತ್ತಿದೆ. ಇಲ್ಲಿ ಕನ್ನಡತನವನ್ನು ಮರುಸ್ಥಾಪನೆ ಮಾಡಬೇಕಿದೆ. ಹಸಿರಿಗೆ ಹೆಸರಾಗಿದ್ದ ಮಹಾನಗರವಿದು. ಇಲ್ಲಿ ಇತ್ತೀಚೆಗೆ ಉದ್ಯಾನಗಳೇ ಮರೆಯಾಗುತ್ತಿವೆ. ಸ್ವಚ್ಛತೆ ಮರೀಚಿಕೆಯಾಗುತ್ತಿದೆ. ಗತ ಹಿರಿಮೆಯನ್ನು ಮತ್ತೆ ಗಳಿಸಬೇಕಿದೆ...

ಈ ನಗರದ ಆಡಳಿತ ವ್ಯವಸ್ಥೆ ಬಗ್ಗೆ ಅನುಭವ ಹೊಂದಿರುವ ಮಾಜಿ ಮೇಯರ್‌ಗಳು ನೂತನ ಮೇಯರ್‌ ಗಂಗಾಂಬಿಕೆ ಅವರಿಗೆ ಹೇಳಿರುವ ಕಿವಿಮಾತುಗಳಿವು.

ಮೇಯರ್‌ ಅವರು ಬುಧವಾರ ಮಾಜಿ ಮೇಯರ್‌ಗಳನ್ನು ಕಚೇರಿಗೆ ಕರೆಯಿಸಿಕೊಂಡು ಅವರಿಂದ ಸಲಹೆ ಪಡೆದರು.

‘ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಂಪೂರ್ಣ ಜಾರಿಯಾಗುವಂತೆ ಮಾಡಬೇಕು. ಈ ನಗರದಲ್ಲಿ ಕನ್ನಡಕ್ಕೆ ಮಹತ್ವ ಸಿಗುವಂತೆ ಮಾಡಬೇಕು’ ಎಂದು ಜೆ.ಹುಚ್ಚಪ್ಪ ಹಾಗೂ ಎಸ್‌.ಕೆ.ನಟರಾಜ್‌ ಸಲಹೆ ನೀಡಿದರು.

‘ನಗರದಲ್ಲಿ ಮರಗಿಡಗಳನ್ನು ಬೆಳೆಸುವಾಗ ಎಚ್ಚರವಹಿಸಬೇಕು. ಆಲಂಕಾರಿಕ ಗಿಡಗಳಿಗಿಂತ ಹೆಚ್ಚಾಗಿ ಆಳವಾಗಿ ಬೇರು ಬಿಡುವ ಹೊಂಗೆ, ಬೇವು ಹಾಗೂ ಸಂಪಿಗೆ ಜಾತಿಯ ಗಿಡಗಳನ್ನು ಬೆಳೆಸಬೇಕು’ ಎಂದು ಹುಚ್ಚಪ್ಪ ಹೇಳಿದರು.

’ಹಿಂದೆ ಈ ನಗರದ ವ್ಯಾಪ್ತಿ ಕಿರಿದಾಗಿತ್ತು. ಆಗ ನಗರದ ಸಮಗ್ರ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೆವು. ಅಂತಹ ದಿನಗಳು ಮತ್ತೆ ಕಾಣುವಂತಾಗಬೇಕು’ ಎಂದು ಲಕ್ಕಣ್ಣ ಹೇಳಿದರು.

ರಾಮಚಂದ್ರಪ್ಪ, ‘ಅಭಿವೃದ್ಧಿ ವಿಚಾರದಲ್ಲಿ ನಾಗರಿಕರನ್ನು ವಿಶ್ವಾಸ ಪಡೆದು ಕೆಲಸಮಾಡಬೇಕು. ಅಧಿಕಾರಿಗಳನ್ನೂ ಆದರದಿಂದ ಕಾಣುವ ಮೂಲಕ ಅವರಿಂದ ಕೆಲಸ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮಾರುಕಟ್ಟೆಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನವಹಿಸಬೇಕು. ವಾರಕ್ಕೊಮ್ಮೆಯಾದರೂ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಬಿ.ಎಸ್‌.ಸತ್ಯನಾರಾಯಣ ಕಿವಿಮಾತು ಹೇಳಿದರು.

ರಸ್ತೆ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚುವಂತೆ ಪುಟ್ಟೇಗೌಡ ತಿಳಿಸಿದರು.

ಆರ್‌.ಸಂಪತ್‌ರಾಜ್‌, ಜಿ.ಪದ್ಮಾವತಿ, ಬಿ.ಎನ್‌.ಮಂಜುನಾಥ ರೆಡ್ಡಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !