ಬೆಂಗಳೂರು: ಕೇಂದ್ರ ಕಾರ್ಮಿಕ ಭವನಕ್ಕೆಬುಧವಾರ ದಿಢೀರ್ ಭೇಟಿ ನೀಡಿದ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಅಲ್ಲಿನ ಅವ್ಯವಸ್ಥೆ ಕಂಡು, ಆಯುಕ್ತೆ ಚೈತ್ರಾ ಅವರನ್ನು ತರಾಟೆ ತೆಗೆದುಕೊಂಡರು.
ಯಾವೊಬ್ಬ ಅಧಿಕಾರಿಯೂ ಕಚೇರಿಯಲ್ಲಿ ಇರದಿದ್ದುದನ್ನುಕಂಡು ಕೋಪಗೊಂಡ ಸಚಿವರು, ಚಲನವಲನ ದಾಖಲೆ ಪುಸ್ತಕದಲ್ಲಿಯೂ ಅಧಿಕಾರಿಗಳ ಕರ್ತವ್ಯ (ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆ) ನಮೂದಾಗಿಲ್ಲ ಎಂದು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.
ಗೈರಾದ ಕೆಲ ಅಧಿಕಾರಿಗಳು ಕಚೇರಿ ಕೆಲಸದ ಮೇಲೆ ದೊಡ್ಡಬಳ್ಳಾಪುರಕ್ಕೆ ತೆರಳಿದ್ದಾರೆ ಎಂದು ನೌಕರರು ತಿಳಿಸಿದರು. ಆ ಬಗ್ಗೆ ಕಚೇರಿ ಆದೇಶ ತೋರಿಸುವಂತೆ ಸಚಿವರು ಸೂಚಿಸಿದರು. ಇದನ್ನು ನೀಡದಿದ್ದಾಗ ಸಿಬ್ಬಂದಿ ವಿರುದ್ಧ ಟೀಕಾಪ್ರಕಾರ ನಡೆಸಿದರು. ಕಾರಣ ನೀಡದೆ ಲೇಬರ್ ಇನ್‌ಸ್ಪೆಕ್ಟರ್ ನಾಗರಾಜಯ್ಯ ಅವರು ಗೈರಾಗಿ ದ್ದುದನ್ನು ತಿಳಿದ ಸಚಿವರು, ಅವರನ್ನು ತಕ್ಷಣ ಅಮಾನತು ಮಾಡುವಂತೆ ಆದೇಶಿಸಿದರು.
ದೂಳು, ಜೇಡರ ಬಲೆಯ ಸ್ವಾಗತ: ಕಚೇರಿಯಲ್ಲಿನ ದೂಳು, ಜೇಡರ ಬಲೆಗಳೇ ಸಚಿವರನ್ನು ಸ್ವಾಗತಿಸಿದವು. ಇದನ್ನು ಕಂಡು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಅವರು, ‘ನಿಮ್ಮ ಮನೆಯನ್ನೂ ಹೀಗೇ ಇಟ್ಟುಕೊಳ್ಳುತ್ತೀರಾ? ಕೆಲಸ ಮಾಡದ ನಿಮ್ಮಂತಹವರನ್ನು ಮೊದಲುವಜಾ ಮಾಡಬೇಕು’ ಎಂದು ಹರಿಹಾಯ್ದರು.
ಗಬ್ಬು ನಾರುತ್ತಿದ್ದ ಶೌಚಾಲಯ: ಸಚಿವರು ಶೌಚಾಲಯಕ್ಕೂ ಭೇಟಿ ನೀಡಿದಾಗ ಅಲ್ಲಿನ ಗಲೀಜು ಕಣ್ಣಿಗೆ ರಾಚಿತು. ಪುರುಷರ ಶೌಚಾಲಯಎಂದು ದೂರ ನಿಂತಿದ್ದ ಚೈತ್ರಾಅವರನ್ನು ಕರೆದ ಸಚಿವರು, ಗಬ್ಬು ನಾರುತ್ತಿದ್ದ ಸ್ಥಿತಿಯ ದರ್ಶನ ಮಾಡಿಸಿದರು.
*ಇಲಾಖೆಗೆ ಚುರುಕು ಮುಟ್ಟಿಸಲು ಪರಿಶೀಲನೆ ನಡೆಸಿದೆ. ಇಲಾಖೆಯಲ್ಲಿ ಏನೇನು ಕೆಲಸ ಆಗಿದೆ, ಆಗಬೇಕಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ