ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಮಳೆ, ಗಾಳಿ: 4,152 ವಿದ್ಯುತ್ ಕಂಬಗಳಿಗೆ ಹಾನಿ

Last Updated 21 ಮೇ 2022, 1:51 IST
ಅಕ್ಷರ ಗಾತ್ರ

ಬೆಂಗಳೂರು: ಧಾರಾಕಾರ ಮಳೆ ಮತ್ತು ಗಾಳಿಗೆ ಕಳೆದ ಎರಡು ವಾರಗಳಲ್ಲಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 4,152ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 261 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. 2 ಕಂಬಗಳಲ್ಲಿ ಅಳವಡಿಸುವ ಸಾಧನಗಳೂ ಹಾನಿಗೊಳಗಾಗಿದ್ದು, 128 ಕಡೆ ಈ ಸಮಸ್ಯೆ ಕಂಡುಬಂದಿದೆ.

ಹಾನಿಗೊಳಗಾದ ವಿದ್ಯುತ್ ಕಂಬಗಳನ್ನು ಬದಲಿಸಲಾಗಿದೆ. ಮೇ 17ರಂದು ಸುರಿದ ಮಳೆಗೆ ಬೆಂಗಳೂರು ನಗರ ಸೇರಿ 8 ಜಿಲ್ಲೆಗಳಲ್ಲಿ 312 ಕಂಬಗಳು ಮುರಿದ್ದಿದ್ದು, 27 ವಿದ್ಯುತ್‌ ಪರಿವರ್ತಕಗಳು ಮತ್ತು ಎರಡು ಕಂಬಗಳಲ್ಲಿ ಅಳವಡಿಸಿದ 10 ಸಾಧನಗಳು ಹಾನಿಗೊಳಗಾಗಿವೆ. ಮೇ 18 ರಂದು, 82 ವಿದ್ಯುತ್ ಕಂಬಗಳು, 5 ಟಿ.ಸಿ ಮತ್ತು ಎರಡು ಕಂಬಗಳಲ್ಲಿ ಅಳವಡಿಸುವ 6 ಸಾಧನಗಳು ಹಾನಿಯಾಗಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಉಪಕೇಂದ್ರ ಮುಳುಗಡೆ: ಭಾರಿ ಮಳೆಗೆ ಮೇ 17 ರಂದು ಬೆಂಗಳೂರಿನ ನಾಗವಾರ ಸಮೀಪದ ಗೆದ್ದಲಹಳ್ಳಿ ಯಲ್ಲಿರುವ 66/11 ಕೆವಿ ಉಪಕೇಂದ್ರ ನೀರಿನಲ್ಲಿ ಮುಳುಗಿತ್ತು. ಶಿವಾಜಿನಗರ ಬೆಸ್ಕಾಂ ವಿಭಾಗದ ಸಿಬ್ಬಂದಿ ರಾತ್ರಿ 12 ಗಂಟೆಗೆ ಜೆಸಿಬಿ ಸಹಾಯದಿಂದ ಕೆಪಿಟಿಸಿಎಲ್ ಆವರಣ ಗೋಡೆ ಒಡೆದು ಸುಮಾರು 1 ಕಿ.ಮೀ. ದೂರದವರೆಗೆ ಪಕ್ಕದ ಜಮೀನಿನಲ್ಲಿ ಕಾಲುವೆ ಮಾಡಿ, ನೀರು ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ವಡ್ಡರಪಾಳ್ಳ, ರಾಜಣ್ಣ ಬಡಾವಣೆ, ಗೆದ್ದಲಹಳ್ಳಿ, ಬೈರತಿ ಸುತ್ತಲಿನ ಪ್ರದೇಶದ ಸುಮಾರು 28ಸಾವಿರ ಗ್ರಾಹಕರಿಗೆ ಮಂಗಳವಾರ ರಾತ್ರಿ 3 ಗಂಟೆ ವೇಳೆಗೆ ವಿದ್ಯುತ್ ಪೂರೈಸಲಾಗಿದೆ ಎಂದು ಶಿವಾಜಿ ನಗರ ವಿಭಾಗದ ಬೆಸ್ಕಾಂ ಅಧಿಕಾರಿಗಳು ತಿಳಿಸಿದರು. ಗೆದ್ದಲಹಳ್ಳಿ ಉಪಕೇಂದ್ರವು ಭಾರಿಮಳೆಗೆ 2020ರಲ್ಲೂ ಮುಳುಗಡೆಯಾಗಿತ್ತು. ಆಗ ವಿದ್ಯುತ್ ಸಂಪರ್ಕ ಸರಿಪಡಿಸಲು 15 ಗಂಟೆಗಳು ಹೆಚ್ಚು ಕಾಲ ತಗಲಿತ್ತು ಎಂದು ಬೆಸ್ಕಾಂ ಶಿವಾಜಿನಗರ ವಿಭಾಗದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT