ಬೆಳ್ಳಂಬೆಳಿಗ್ಗೆ ಮಳೆ ಅಬ್ಬರ

7

ಬೆಳ್ಳಂಬೆಳಿಗ್ಗೆ ಮಳೆ ಅಬ್ಬರ

Published:
Updated:
Deccan Herald

ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಜೋರಾಗಿ ಸುರಿದು ರಾತ್ರಿ ಬಿಡುವು ಕೊಟ್ಟಿದ್ದ ಮಳೆ, ಗುರುವಾರ ಬೆಳ್ಳಂಬೆಳಿಗ್ಗೆಯೇ ಅಬ್ಬರಿಸಿತು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ನಗರದ ಹಲವೆಡೆ ಜೋರು ಮಳೆಯಾಯಿತು. ನಂತರ, ಬಿಡುವು ಕೊಡುತ್ತಲೇ ಸಂಜೆಯವರೆಗೂ ಸುರಿಯಿತು. ಅದರಿಂದಾಗಿ ರಸ್ತೆ ಮೇಲೆ ನೀರು ಹರಿದು ಹೊಳೆಯೇ ನಿರ್ಮಾಣವಾಗಿತ್ತು. ಅದರಲ್ಲೇ ವಾಹನಗಳು ಸಂಚರಿಸಿದವು.

ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಮಲ್ಲೇಶ್ವರ, ಶಾಂತಿನಗರ, ಜಯನಗರ, ನಾಯಂಡಹಳ್ಳಿ, ಹಲಸೂರು, ಇಂದಿರಾನಗರ, ಶಿವಾಜಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು. ಉಳಿದಂತೆ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಿತು.

‘ನಗರದಲ್ಲಿ ಜೋರು ಮಳೆಯಾಗಿದೆ. ಮರಗಳು ಉರುಳಿಬಿದ್ದ ಸೇರಿದಂತೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಅಧಿಕಾರಿ ತಿಳಿಸಿದರು.

ಹವಾಮಾನ ಇಲಾಖೆ ಅಧಿಕಾರಿಯೊಬ್ಬರು, ‘ನಗರದಲ್ಲಿ ಇನ್ನೆರಡು ದಿನ ಮಳೆ ಮುಂದುವರಿಯಲಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !