ಮೈಸೂರು ಸಿಲ್ಕ್‌ ಸ್ಪರ್ಧೆ ವಿಜೇತರಿಗೆ ಬಹುಮಾನ

7

ಮೈಸೂರು ಸಿಲ್ಕ್‌ ಸ್ಪರ್ಧೆ ವಿಜೇತರಿಗೆ ಬಹುಮಾನ

Published:
Updated:
Deccan Herald

ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (ಕೆಎಸ್‌ಐಸಿ) ವತಿಯಿಂದ ಏರ್ಪಡಿಸಿದ್ದ ‘ಮೈಸೂರು ಸಿಲ್ಕ್‌ ವಿಂಟೇಜ್‌ ಸಾರಿ’ ಸ್ಪರ್ಧೆಯಲ್ಲಿ ಪದ್ಮಾವತಿ ಸುಬ್ಬಣ್ಣ ಹಾಗೂ ಬಿ.ಆರ್‌.ಶರ್ಮಿಳಾ ಅವರು ವಿಜೇತರಾದರು.

ಬಹುಮಾನ ಪಡೆದ ಮಹಿಳೆಯರಿಬ್ಬರಿಗೂ ₹18 ಸಾವಿರ ಮೊತ್ತದ ಚೆಕ್‌ ಹಾಗೂ ಟ್ರೋಫಿ ನೀಡಲಾಯಿತು. ಜೊತೆಗೆ ಐದು ಮಂದಿಗೆ ₹ 5 ಸಾವಿರ ಮೊತ್ತದ ಸಮಾಧಾನಕರ ಬಹುಮಾನವನ್ನೂ ನೀಡಲಾಯಿತು.

ಬುಧವಾರದಿಂದ ಶೇ 25ರ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳ ಮಾರಾಟ ಆರಂಭವಾಗಿದೆ. ಹಬ್ಬದ ಪ್ರಯುಕ್ತ ಅಕ್ಟೋಬರ್‌ 17ರವರೆಗೆ ಮಾರಾಟ ಮುಂದುವರಿಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !